ಸಾರಾಂಶ
ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ನಿರ್ವಹಣೆ ಸುಲಲಿತ. ಆದರೆ ನಮ್ಮ ಪೂರ್ವಜರು ಆರಾಧಿಸುವ ಪುಣ್ಯಪವಿತ್ರ ಸಾನ್ನಿಧ್ಯದ ಇತಿಹಾಸ ಅರಿಯಬೇಕು. ಪರಂಪರೆ ಉಳಿಸುವ ಮೂಲಕ ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ- ಮಾನಸಿಕ ಆರೋಗ್ಯ ವರ್ಧಿಸಲಿದೆ. ಧಾರ್ಮಿಕಪ್ರಜ್ಞೆ ಬೆಳೆದು ಪ್ರೀತಿ- ವಾತ್ಸಲ್ಯದ ಸಂಬಂಧಗಳು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ರಿಪ್ಪನ್‌ಪೇಟೆ: ಪ್ರಾಚೀನ ತೀರ್ಥಕ್ಷೇತ್ರಗಳು ಪ್ರಕೃತಿ- ಪರಿಸರ ರಕ್ಷಣೆಯ ಸಂದೇಶ ಸಾರುವ ಐತಿಹ್ಯ ಹೊಂದಿವೆ. ನದಿಗಳ ಮೂಲವಾಗಿರುವ ಕುಮದ್ವತಿ ತೀರ್ಥವು ಪ್ರಕೃತಿಯ ಒಡಲಿನಿಂದ ಜಲಧಾರೆಯನ್ನು ಮಾನವ ಕುಲಕ್ಕೆ ಮತ್ತು ಪ್ರಾಣಿ- ಪಕ್ಷಿಗಳಿಗೆ ನೀಡುವ ಅಪೂರ್ವ ತಾಣ ಎಂದು ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಪೀಠಾಧಿಪತಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನುಡಿದರು.
ಇಲ್ಲಿಗೆ ಸಮೀಪದ ಹೊಂಬುಜ ಜೈನಮಠದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಬಳಿಕ ಭೂಮಿಗೆ ಅಮೂಲ್ಯ ಜಲನಿಧಿಯಾಗಿ ಆರಾಧಿಸಲ್ಪಡುವ ಕುಮುದ್ವತಿ ತೀರ್ಥದಲ್ಲಿ ಕಾರ್ತೀಕ ಲಕ್ಷದೀಪೋತ್ಸವ ನಿಮಿತ್ತ ನಡೆದ ಧಾರ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು.ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ನಿರ್ವಹಣೆ ಸುಲಲಿತ. ಆದರೆ ನಮ್ಮ ಪೂರ್ವಜರು ಆರಾಧಿಸುವ ಪುಣ್ಯಪವಿತ್ರ ಸಾನ್ನಿಧ್ಯದ ಇತಿಹಾಸ ಅರಿಯಬೇಕು. ಪರಂಪರೆ ಉಳಿಸುವ ಮೂಲಕ ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ- ಮಾನಸಿಕ ಆರೋಗ್ಯ ವರ್ಧಿಸಲಿದೆ. ಧಾರ್ಮಿಕಪ್ರಜ್ಞೆ ಬೆಳೆದು ಪ್ರೀತಿ- ವಾತ್ಸಲ್ಯದ ಸಂಬಂಧಗಳು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಸಂಸ್ಕೃತಿಯು ಸ್ಥಾನಿಕ ಅಭಿವೃದ್ಧಿ, ರಕ್ಷಣೆಗೆ ಸಂದೇಶ ನೀಡುತ್ತಿದೆ. ಪ್ರತಿಯೋರ್ವರ ಸದ್ಭಾವನೆಯ ಜೀವನ ಯಶಸ್ವಿಯಾಗಲಿ ಎಂದು ಆಶೀರ್ವಚನ ನೀಡಿದರು.ವಿವಿಧ ಗಣ್ಯರ, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- - --ಫೋಟೋ:ಡಾ.ದೇವೇಂದ್ರಕೀರ್ತಿ ಭಟ್ಟಾರಕ ಶ್ರೀ