ಸಾರಾಂಶ
ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ.  ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಗಳ ಮುಂಭಾಗದಲ್ಲಿ ಮರ-ಗಿಡಗಳನ್ನು ಬೆಳೆಸಿ, ಹಸಿರು ವನಗಳನ್ನಾಗಿಸುವ ಜವಾಬ್ದಾರಿ ಮೆರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದ್ದಾರೆ.
- ದೋಣಿಹಳ್ಳಿಯಲ್ಲಿ ಪರಿಸರ ಜಾಗೃತಿ- ಗಿಡ ನಾಟಿ ಕಾರ್ಯಕ್ರಮ
- - -ಕನ್ನಪ್ರಭ ವಾರ್ತೆ ಚನ್ನಗಿರಿ
ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಗಳ ಮುಂಭಾಗದಲ್ಲಿ ಮರ-ಗಿಡಗಳನ್ನು ಬೆಳೆಸಿ, ಹಸಿರು ವನಗಳನ್ನಾಗಿಸುವ ಜವಾಬ್ದಾರಿ ಮೆರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದರು.ತಾಲೂಕಿನ ದೋಣಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಸಿರು ವನಗಳು ಸಮೃದ್ಧಿ ಆಗಿರುವಲ್ಲಿ ಅಂತಹ ಪ್ರದೇಶದಲ್ಲಿ ಪರಿಶುದ್ಧ ಆಮ್ಲಜನಕ ದೊರೆತು ಆರೋಗ್ಯ ಸುಧಾರಿಸುವಲ್ಲಿ ಸಹಕಾರಿಯಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಭಾಗಿಯಾಗಿ ಸಹಕಾರ ನೀಡಬೇಕಾಗಿದೆ ಎಂದರು.ಕ್ಷೇತ್ರ ಯೋಜನಾಧಿಕಾರಿ ರೂಪ ಮಾತನಾಡಿ, ಪ್ರಸ್ತುತವಾಗಿ ಪರಿಸರವು ಕೆಟ್ಟ ವಾತಾವರಣದಿಂದ ಕೂಡಿದೆ. ಈ ಸಮಸ್ಯೆ ಹೋಗಲಾಡಿಸಬೇಕಾದರೆ ಹೆಚ್ಚು ಗಿಡ- ಮರಗಳನ್ನು ನೆಟ್ಟು, ಪೋಷಣೆ ಮಾಡಬೇಕು. ಆ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅನುಸೂಯ ಮರುಳುಸಿದ್ದಪ್ಪ ಅವರು ನೋಟ್ ಪುಸ್ತಕ ಮತ್ತು ಲೇಖನಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಪಿಡಿಒ ಗಿರೀಶ್, ಪ್ರಭಾರ ಮುಖ್ಯ ಶಿಕ್ಷಕ ಸುರೇಶ್, ಗ್ರಾಪಂ ಸದಸ್ಯ ಸುನೀಲ್, ಶಿವಲಿಂಗ ಸ್ವಾಮಿ, ಮಂಜುಳ ಪರಮೇಶ್, ಬಸವರಾಜಪ್ಪ, ಜಗದೀಶ್, ಶಿವಲಿಂಗಪ್ಪ, ತಾಲೂಕು ಕೃಷಿ ಅಧಿಕಾರಿ ಹನುಮಂತಪ್ಪ ಭಾಗವಹಿಸಿದ್ದರು.
- - - -10ಕೆಸಿಎನ್‌ಜಿ1.ಜೆಪಿಜಿ: ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))