ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ಜಿಲ್ಲೆಯ ವತಿಯಿಂದ ವಿರಾಜಪೇಟೆ ಗ್ರಾಮಾಂತರ ಹಾಗೂ ಪಟ್ಟಣ ಪೊಲೀಸ್ ಠಾಣೆಗಳ ಸಿಬ್ಬಂದಿಗಾಗಿ ಎಚ್‌ಐವಿ, ಸಿಪಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್, ಅಸಾಂಕ್ರಾಮಿಕ ರೋಗಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಒಳಗೊಂಡ ಸಮಗ್ರ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ನಡೆಯಿತು.

ವಿರಾಜಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ಜಿಲ್ಲೆಯ ವತಿಯಿಂದ ವಿರಾಜಪೇಟೆ ಗ್ರಾಮಾಂತರ ಹಾಗೂ ಪಟ್ಟಣ ಪೊಲೀಸ್ ಠಾಣೆಗಳ ಸಿಬ್ಬಂದಿಗಾಗಿ ಎಚ್‌ಐವಿ, ಸಿಪಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್, ಅಸಾಂಕ್ರಾಮಿಕ ರೋಗಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಒಳಗೊಂಡ ಸಮಗ್ರ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ನಡೆಯಿತು.

ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅನುಪ್ ಮಾದಪ್ಪ ಉದ್ಘಾಟಿಸಿದರು.ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಹಾಗೂ ಐಸಿಟಿಸಿ (ಚರ್ಮರೋಗ ತಜ್ಞರು), ಸರ್ಕಾರಿ ಆಸ್ಪತ್ರೆ ವಿರಾಜಪೇಟೆ, ಡಾ.ಹರೀಶ್, ಡಾ.ಅರ್ಚನಾ, ಉಪ ನಿರೀಕ್ಷಕ ಪ್ರಮೋದ್ ಹಾಗೂ ಲತಾ, ಐಸಿಟಿಸಿ ಆಪ್ತ ಸಮಾಲೋಚಕರಾದ ಚಿಟ್ಟಿಯಪ್ಪ ಹಾಗೂ ಚಂದ್ರಶೇಖರ್, ಎಸ್‌ಟಿಎಸ್ ವಿನಿಲ್ ಉಪಸ್ಥಿತರಿದ್ದರು.ಈ ಶಿಬಿರವನ್ನು ಐಸಿಟಿಸಿ, ಎನ್‌ಟಿಇಪಿ, ಎನ್‌ಸಿಡಿ, ಆರ್‌ಬಿಎಸ್‌ಕೆ ಹಾಗೂ ಎನ್‌ವಿಎಚ್‌ಸಿಪಿ ತಂಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕುಟ್ಟಂದಿ ಹಾಗೂ ಕಾಕೋಟುಪರಂಬು ಅವರ ಸಹಯೋಗದೊಂದಿಗೆ ಆಯೋಜಿಸಲಾಯಿತು.ಶಿಬಿರದಲ್ಲಿ ಪೊಲೀಸ್ ಸಿಬ್ಬಂದಿಗೆ ಎಚ್‌ಐವಿ, ಸಿಪಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್, ಅಸಾಂಕ್ರಾಮಿಕ ರೋಗಗಳು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, ಅಗತ್ಯ ಆರೋಗ್ಯ ಸಲಹೆ, ಆರೋಗ್ಯ ಶಿಕ್ಷಣ ಹಾಗೂ ಜಾಗೃತಿ ಮೂಡಿಸಲಾಯಿತು.ಸಾರ್ವಜನಿಕರಲ್ಲಿ ಡಿಜಿಟಲ್ ಸೇವೆಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಿಖ ಕೋಡ್ ಪೋಸ್ಟರ್ ಅನ್ನು ಶಿಬಿರದಲ್ಲಿ ಪ್ರದರ್ಶಿಸಲಾಯಿತು. ಈ ಕುರಿತು ಐಸಿಟಿಸಿ ಆಪ್ತಸಮಾಲೋಚಕರಾದ ಚಿಟ್ಟಿಯಪ್ಪ ಹಾಗೂ ಚಂದ್ರಶೇಖರ್, ಸರ್ಕಾರಿ ಆಸ್ಪತ್ರೆ ವಿರಾಜಪೇಟೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪ ಅವರು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು.ಡಿಪಿಸಿ ನವೀನ್, ಎಸ್‌ಟಿಎಲ್‌ಎಸ್ ಪ್ರದೀಪ್, ಟಿಬಿಎಚ್‌ವಿ ಮಂಜು, ಐಸಿಟಿಸಿ ಲ್ಯಾಬ್ ಟೆಕ್ನೀಷಿಯನ್ ರಂಗಮಣಿ, ಸಿಎಚ್‌ಒ ಸಂಗೀತಾ, ಸಿಎಚ್‌ಒ ಪ್ರಿಯಾ ಹಾಗೂ ಸಿಎಚ್‌ಒ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.