ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲುಕೋಟೆ ಯೋಜನಾ ಕಚೇರಿ ಟಿ.ಎಸ್.ಛತ್ರ ವಲಯದ ಮಾಣಿಕ್ಯನಹಳ್ಳಿ ಕಾರ್ಯ ಕ್ಷೇತ್ರದಲ್ಲಿ ಪ್ರಕೃತಿ ವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಮೂಳೆ ತಜ್ಞ ಡಾ.ನಾಗೇಶ ಗೌಡ, ಜನರಲ್ ಮೆಡಿಸಿನ್ ಡಾ.ಕೃಷ್ಣಸ್ವಾಮಿ, ಒಕ್ಕೂಟದ ಅಧ್ಯಕ್ಷೆ ಅನಿತಾರಾಣಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ರಾಘವೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲುಕೋಟೆ ಯೋಜನಾಧಿಕಾರಿ ಸರೋಜ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಮೂಳೆ ತಜ್ಞ ಡಾ.ನಾಗೇಶ ಗೌಡ ಅವರು, ಧರ್ಮಸ್ಥಳ ಹೇಮಾವತಿ ಅಮ್ಮನವರ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳೆಯರ ಕುಂದುಕೊರತೆಗಳನ್ನು ಕಂಡುಹಿಡಿದು ಅವರಿಗೆ ಪ್ರೋತ್ಸಾಹಿಸಿ ಪ್ರತಿಯೊಂದು ಹಂತದಲ್ಲೂ ಆರ್ಥಿಕವಾಗಿ ಸದೃಢವಾಗಿ ಮಾಡುವಂತೆ ಹಲವು ಕಾರ್ಯಕ್ರಮಗಳನ್ನು ಮಾಡುತಿದ್ದೇವೆ. ಅದರಲ್ಲಿ ಆರೋಗ್ಯ ಶಿಬಿರವು ಒಂದಾಗಿರುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ ಚಿಕ್ಕ ವಯಸ್ಸಿನಲ್ಲಿ ಕಂಡು ಬರುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಆದ್ದರಿಂದ ಸ್ತ್ರೀರೋಗ ತಜ್ಞೆ, ಮೂಳೆ ತಜ್ಞರ ಬಳಿ ಪ್ರತಿಯೊಂದು ಸಂಬಂಧ ಪಟ್ಟ ಖಾಯಿಲೆಗಳಿಗೆ ಮುಕ್ತವಾಗಿ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ಈ ವೇಳೆ ವಲಯದ ಮೇಲ್ವಿಚಾರಕರ ಪುಷ್ಪಾವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತ ಸೇವಾಪ್ರತಿನಿಧಿಯವರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.3 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿಗೆ ಪಿ.ರವಿಕುಮಾರ್ ಭೂಮಿಪೂಜೆ
ಮಂಡ್ಯ: ತಾಲೂಕಿನ ವಿವಿಧ ಗ್ರಾಮಗಳಲ್ಲಿ 3 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು,50 ವರ್ಷಗಳಿಂದ ರಸ್ತೆಗಳು ಅಭಿವೃದ್ದಿ ಕಂಡಿರಲಿಲ್ಲ. ನಾನು ಶಾಸಕನಾದ ಮೇಲೆ ಸಾಕಷ್ಟು ರಸ್ತೆಗಳು ಡಾಂಬರೀಕರಣ ಕಾಣುತ್ತಿವೆ. ತಾಲೂಕಿನ ಚಿಕ್ಕಬಾಣಸವಾಡಿ ಮತ್ತು ಗುಡಿಗೇನಹಳ್ಳಿ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ತಂದು ಅಭಿವೃದ್ದಿ ಮಾಡಿತ್ತಿದ್ದೇವೆ ಎಂದರು.
ಹೊನ್ನಾಯ್ಕನಹಳ್ಳಿ ಗೇಟ್‌ನಿಂದ ದೊಡ್ಡಬಾಣಸವಾಡಿ ಗ್ರಾಮದವರಗೆ ರಸ್ತೆ ಅಭಿವೃದ್ದಿಗೆ 1.50 ಕೋಟಿ ರು., ಗುಡಿಗೇನಹಳ್ಳಿ ಗೇಟ್‌ನಿಂದ ಗ್ರಾಮದವರಗೆ 1.50 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದರು.ಈ ವೇಳೆ ಗುತ್ತಿಗೆದಾರ ಬೋಜೇಗೌಡ, ಮುಖಂಡರಾದ ಚಂದ್ರು, ವಸಂತರಾಜು ಸೇರಿದಂತೆ ಗ್ರಾಮಸ್ಥರು ಇದ್ದರು.