ವಿಕಾಸ್ ಜನಸೇವಾ ಕೇಂದ್ರದಲ್ಲಿ ಮಿಸ್ಟಿ ಹಿಲ್ಸ್ ನಿಂದ ಆರೋಗ್ಯ ತಪಾಸಣೆ

| Published : Sep 02 2025, 12:00 AM IST

ವಿಕಾಸ್ ಜನಸೇವಾ ಕೇಂದ್ರದಲ್ಲಿ ಮಿಸ್ಟಿ ಹಿಲ್ಸ್ ನಿಂದ ಆರೋಗ್ಯ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

34 ಆಶ್ರಿತರಿಗೆ ರೋಟರಿ ಮಿಸ್ಟಿ ಹಿಲ್ಸ್‌ ವತಿಯಿಂದ ನೇತ್ರ ಉಚಿತ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.

ಮಡಿಕೇರಿ: ನಗರದ ವಿಕಾಸ್ ಜನಸೇವಾ ಕೇಂದ್ರದಲ್ಲಿರುವ 34 ಆಶ್ರಿತರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇತ್ರ ಉಚಿತ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.ನೇತ್ರ ತಜ್ಞರಾದ ಡಾ. ಎಸ್.ಎಂ.ಚೇತನ್, ಡಾ. ಸಿ. ಆರ್. ಪ್ರಶಾಂತ್, ನೇತ್ರ ತಪಾಸಣೆ, ಚಿಕಿತ್ಸೆ ನೀಡಿದರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಚೇತನ್ ಮತ್ತು ಡಾ ಸುಹಾಸ್ ಆರೋಗ್ಯ ತಪಾಸಣೆ ಚಿಕಿತ್ಸೆ ಕೈಗೊಂಡರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ನಿರ್ದೇಶಕರಾದ ಜಗದೀಶ್ ಪ್ರಶಾಂತ್, ಪ್ರಮೋದ್ ರೈ ಪ್ರಕಾಶ್ ಪೂವಯ್ಯ, ಪ್ರಸಾದ್ ಗೌಡ, ತಾನ್ಯ ಶಿಬಿರ ನಿರ್ವಹಿಸಿದರು.

--------------------------------------

ಪ್ರಧಾನ ಮಂತ್ರಿ ಮತ್ರ್ಯ ಸಂಪದ ಯೋಜನೆಯಡಿ ಅರ್ಜಿ ಆಹ್ವಾನಮಡಿಕೇರಿ: ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ (ಪಿಎಂಎಂಎಸ್‌ವೈ) ಯೋಜನೆಯಡಿ (1.3)ಹೊಸ ಪಾಲನೆ ಕೊಳಗಳ ನಿರ್ಮಾಣ (ನರ್ಸರಿ/ ಮೀನುಮರಿ ಪಾಲನೆಕೊಳಗಳು) ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಫಲಾನುಭವಿಗಳಿಗೆ ಶೇಕಡ 40 ರಷ್ಟು ಸಹಾಯಧನ ನೀಡಲಾಗುವುದು.ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಚಿನ್ ಸಿ.ಎಸ್. ಅವರು ತಿಳಿಸಿದ್ದಾರೆ.