ಶಂಕರಲಿಂಗ ಗಜಾನನ ಮಂಡಳಿಯಿಂದ ಆರೋಗ್ಯ ತಪಾಸಣೆ

| Published : Sep 13 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಗಣೇಶ ಚತುರ್ಥಿ ನಿಮಿತ್ತ ಜೋರಾಪುರ ಪೇಠನಲ್ಲಿರುವ ಶಂಕರಲಿಂಗ ಗಜಾನನ ಮಂಡಳಿ ವತಿಯಿಂದ ನಗರದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು. ಆರೋಗ್ಯ ಉಚಿತ ತಪಾಸಣೆಯಲ್ಲಿ ಸಂಧಿವಾತ, ಅರ್ಥೈಟಿಸ್ ಸಮಸ್ಯೆಗಳಿಗೆ ಔಷಧಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗಣೇಶ ಚತುರ್ಥಿ ನಿಮಿತ್ತ ಜೋರಾಪುರ ಪೇಠನಲ್ಲಿರುವ ಶಂಕರಲಿಂಗ ಗಜಾನನ ಮಂಡಳಿ ವತಿಯಿಂದ ನಗರದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು. ಆರೋಗ್ಯ ಉಚಿತ ತಪಾಸಣೆಯಲ್ಲಿ ಸಂಧಿವಾತ, ಅರ್ಥೈಟಿಸ್ ಸಮಸ್ಯೆಗಳಿಗೆ ಔಷಧಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿದ ಖ್ಯಾತ ವೈದ್ಯ ಡಾ.ರೇವಣೇಶ ಮಿರ್ಜಿ ಮಾತನಾಡಿ, ಸಂಧಿವಾದದಲ್ಲಿ ನೂರಕ್ಕೂ ಹೆಚ್ಚು ವಿಭಿನ್ನ ಸಂಧಿವಾತಗಳು ಇವೆ. ಮುಖ್ಯವಾಗಿ ಅಸ್ತಿ ಸಂಧಿವಾತ ಬಹಳಷ್ಟು ಜನರಿಗೆ ವಯಸ್ಸಿನ ನಂತರ ಕಾಣುತ್ತದೆ. ಅಸ್ತಿ ಸಂಧಿವಾತ, ರೋಮೊಟೈಡ್, ಅರ್ಥೈರಿಟಿಸ್ ಸಂಧಿವಾದ ಹೆಚ್ಚಿನ ಜನರಿಗೆ 30 ರಿಂದ 50 ವರ್ಷದ ಆಸುಪಾಸಿನಲ್ಲಿ ಕಂಡು ಬರುತ್ತವೆ. ಈ ಸಂಧಿವಾತದ ಮುಖ್ಯ ಲಕ್ಷಣಗಳು ಕೀಲುಗಳಲ್ಲಿ ಬಾವು ಬರುವುದು, ಬೆಳಗ್ಗೆ ಎದ್ದ ತಕ್ಷಣ ಬಿಗಿತದ ಭಾವನೆ, ಕೀಲುಗಳಲ್ಲಿ ನೋವು ಕಾಣುತ್ತದೆ ಎಂದರು.ಶಂಕರಲಿಂಗ ಬಣಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹೇಶ ಹೇರಲಗಿ ಮಾತನಾಡಿ, ಮಂಡಳಿಯ ಸದಸ್ಯರು ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಅನೇಕ ಬಡ ಜನರಿಗೆ ಅನುಕೂಲವಾಗಿದೆ. ಸದಸ್ಯರು ಸಮಾಜಮುಖಿಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಪವಾಡಪ್ಪ ಗಿಡವೀರ ಮಾತನಾಡಿದರು. ವೇದಿಕೆಯ ಮೇಲೆ ಶಂಕರಲಿಂಗ ಗಜಾನನ ಮಂಡಳಿಯ ಅಧ್ಯಕ್ಷ ಆಶಿಶ್ ಹುಣಶ್ಯಾಳ, ಉದ್ಯಮಿ ಅಪ್ಪು ಹೇರಲಗಿ, ರಮಾಕಾಂತ ಲೋಣಿ, ಉಪಸ್ಥಿತರಿದ್ದರು. ದಾನಪ್ಪ ಕುರ್ಲೆ ನಿರೂಪಿಸಿದರು. ಮಹೇಶ ಕುರ್ಲೆ ವಂದಿಸಿದರು.