ಶಿಮಂತೂರು ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

| Published : Oct 27 2024, 02:15 AM IST

ಸಾರಾಂಶ

ಎ ಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನ ಸಹಯೋಗದೊಂದಿಗೆ ಶಿಮಂತೂರು ಶಾಲೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಹಾಗೂ ದಂತ ವೈದ್ಯಕೀಯ ಶಿಬಿರ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ನಮ್ಮ ಪರಿಸರದಲ್ಲಿರುವ ಪರಿಶುದ್ಧ ಗಾಳಿ, ನೀರು, ಆಹಾರವನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯಕರ ಜೀವನವನ್ನು ನಡೆಸಬೇಕು ಎಂದು ಲಯನ್ಸ್‌ ಜಿಲ್ಲಾ ಪ್ರಾಂತ್ಯಾಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಹೇಳಿದರು.ಮೂಲ್ಕಿಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ ಫಯರ್‌, ಲಿಯೋ ಕ್ಲಬ್ ಯನ್ ಇನ್ಸ್ಪೈರ್, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಾಲೆಯ ಶಿಕ್ಷಕ ರಕ್ಷಕ ಸಂಘದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಎ ಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನ ಸಹಯೋಗದೊಂದಿಗೆ ಶಿಮಂತೂರು ಶಾಲೆಯಲ್ಲಿ ಜರುಗಿದ ಬೃಹತ್ ಆರೋಗ್ಯ ತಪಾಸಣಾ ಹಾಗೂ ದಂತ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಯ ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ ವಹಿಸಿದ್ದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ ಫಯರ್‌ ನ ಅಧ್ಯಕ್ಷ ಶಿವಪ್ರಸಾದ್ ಶಿಬಿರವನ್ನು ಉದ್ಘಾಟಿಸಿದರು. ಶ್ರೀ ಶಾರದಾ ಸೆಂಟ್ರಲ್ ಸ್ಕೂಲು ನ ಸಂಚಾಲಕ ದೇವಪ್ರಸಾದ್‌ ಪುನರೂರು, ವೈದ್ಯರಾದ ಡಾ. ಕೃಷ್ಣ, ಡಾ. ಶಿಲ್ಪಾ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಸ್ವಾಗತಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ ವಂದಿಸಿದರು. ಶಿಕ್ಷಕಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.