ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿಮಕ್ಕಳು ರೋಗಗಳಿಂದ ದೂರವಿರಲು ನಿತ್ಯ ಯೋಗಾಸನ ಮಾಡುವುದು ಹಾಗೂ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡಬೇಕು ಎಂದು ಆರ್.ಎಂ.ಶಹಾ ಪಬ್ಲಿಕ್ ಶಾಲೆ ಅಧ್ಯಕ್ಷ ಡಿ.ಆರ್.ಶಹಾ ಹೇಳಿದರು. ಪಟ್ಟಣದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಖ್ಯಾತ ಮಕ್ಕಳ ತಜ್ಞ ಡಾ.ಶೀತಲ್ ಶಹಾ ತಂಡದವರು, ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆ ವೈದ್ಯರು, ಇಂಡಿ ವೈದ್ಯ ಡಾ.ಜಿ.ಎಚ್ ಬಿರಾದಾರ, ಡಾ. ಶ್ರೀಕಾಂತ ಕಳಸಗಿ, ಡಾ.ಎಂ.ಬಿ ಬಡಿಗೇರ, ಡಾ.ಈಶ್ವರ ಪಟೇಲ್, ಡಾ.ಪ್ರತೀಕ್ ಪಾಟೀಲ್, ಡಾ.ರಮೇಶ್ ಅಪ್ತಾಗಿರಿ, ಡಾ.ರಾಜ ನಂದಿನಿ ಅಪ್ತಾಗಿರಿ, ಡಾ.ಈರಪ್ಪ ಬಡಿಗೇರ, ಡಾ.ಉಮಾಶ್ರೀ ಸುತಾರ, ಡಾ.ಮಹಾರಾಜ ಗಾಣಿಗೇರ, ಡಾ.ಸೌಮ್ಯಾ ಪಾಟೀಲ್, ಡಾ.ಕೀರ್ತಿ, ಡಾ ಶರಣಬಸವ, ಡಾ.ಪೂರ್ಣಚಂದ್ರ, ಡಾ.ಪ್ರಿಯಾ, ಡಾ.ಬಿ ವರುಣ್, ಡಾ.ಗಿರಿಜಾ ಎರಲಿಗಿ, ಡಾ.ದ್ರಾಕ್ಷಾಯಿಣಿ ವೈದ್ಯರು ಮಕ್ಕಳ ಆರೋಗ್ಯದ ತಪಾಸಣೆ ಮಾಡಿದರು. ಈ ವೇಳೆ ಆಡಳಿತಾಧಿಕಾರಿ ಕಲ್ಪನಾ ಶಹಾ, ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್, ಎಫ್. ಕೆ. ಜೋಶಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪರವೀನ ಜಮಾದಾರ, ಶಾಲಾ ವಿಭಾಗದ ಪ್ರಾಂಶುಪಾಲ ಪ್ರಕಾಶ್ ಪಾಟೀಲ್, ಸಿಬ್ಬಂದಿ , ವಿದ್ಯಾರ್ಥಿಗಳು ಇದ್ದರು.