ಸಾರಾಂಶ
ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂತು. ರಕ್ತದ ಒತ್ತಡ ಮಧುಮೇಹ, ಇಸಿಜಿ, ಶ್ರವಣದೋಷ ಪರೀಕ್ಷೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಏ. 28 ರಂದು ಮೈಸೂರು ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರಿಂದ ನಡೆಸಲಾಯಿತು
ಕನ್ನಡಪ್ರಭ ವಾರ್ತೆ ಮೈಸೂರು
ಹಿರಿಯ ನಾಗರಿಕರ ಮಂಡಳಿಯು ಹಿರಿಯ ನಾಗರೀಕರಿಗೆ ನಾರಾಯಣ ಹೃದಯಾಲಯದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂತು. ರಕ್ತದ ಒತ್ತಡ ಮಧುಮೇಹ, ಇಸಿಜಿ, ಶ್ರವಣದೋಷ ಪರೀಕ್ಷೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಏ. 28 ರಂದು ಮೈಸೂರು ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರಿಂದ ನಡೆಸಲಾಯಿತು. ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರು ತಪಾಸಣೆಗೆ ಒಳಗಾಗಿ ಸಲಹೆ ಪಡೆದರು.
ಟ್ರಸ್ಟ್ ನ ಅಧ್ಯಕ್ಷ ಗೌಡಪ್ಪ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದ ನಾರಾಯಣ ಆಸ್ಪತ್ರೆಯ ವೈದ್ಯರು ಮತ್ತು ತಂಡದವರಿಗೆ ಕೃತಜ್ಞತೆ ಸಲ್ಲಿಸಿದರು.ಮಂಡಳಿ ಅಧ್ಯಕ್ಷ ಡಾ.ಎಚ್.ಎಂ. ನಾಗರಾಜು ಮಾತನಾಡಿ, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಈ ರೀತಿಯ ಆರೋಗ್ಯ ಶಿಬಿರ ನಿಗದಿತ ಸಮಯದಲ್ಲಿ ಮಂಡಲಿಯಿಂದ ನಡೆಸಲಾಗುವುದು ಮತ್ತು ಸಾರ್ವಜನಿಕರು ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದರು.
ಶಿಬಿರದಲ್ಲಿ ಕೆ.ಎಸ್. ಕೃಷ್ಣ, ಪ್ರೊ. ಜರವೇಗೌಡ, ಕೆ.ವಿ. ರಾಮನಾಥ್, ಕೆ.ಬಿ. ರಾಮಣ್ಣ, ಎಲ್.ಎನ್. ಆಚಾರ್, ಶ್ರೀಧರ್, ವೆಂಕಟೇಶಯ್ಯ, ಸುಶೀಲಾ ಮರೀಗೌಡ, ಡಿ.ಆರ್. ಶ್ರೀನಿವಾಸ್, ಸ್ವಾಮೀಗೌಡ, ರಂಗನಾಥರಾವ್ ಮೊದಲಾದವರು ಇದ್ದರು.