ಸಾರಾಂಶ
ದೈಹಿಕ ಶಿಕ್ಷಣದಿಂದ ಆರೋಗ್ಯ, ಮನಸ್ಸು ಹಿಡಿತದಲ್ಲಿ ಇರುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಜಿ.ಎಚ್.ಶ್ರೀನಿವಾಸ ಚಾಲನೆಕನ್ನಡಪ್ರಭ ವಾರ್ತೆ ಅಜ್ಜಂಪುರ
ದೈಹಿಕ ಶಿಕ್ಷಣದಿಂದ ಆರೋಗ್ಯ, ಮನಸ್ಸು ಹಿಡಿತದಲ್ಲಿ ಇರುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಪಟ್ಟಣದ ಶೆಟ್ರು ಸಿದ್ದಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಟಿಸಿ ಮಾತನಾಡಿದರು.
ಸರ್ಕಾರ ಕ್ರೀಡಾ ಪಟುಗಳಿಗೆ ಯುವಜನ ಇಲಾಖೆಯಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ಪ್ರಾಥಮಿಕ ಶಾಲೆಯ ಹಂತದಿಂದ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಸಚಿವರಿಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.ಕಾಲೇಜು ಅಬಿವೃದ್ಧಿ ಸಮಿತಿ ಸದಸ್ಯೆ ರಚನಾ ಶ್ರೀನಿವಾಸ್ ಪ್ರತಿಜ್ಞಾವಿಧಿ ಬೋದಿಸಿದರು. ಪ್ರಾಂಶುಪಾಲರಾದ ಎಚ್.ಎಂ.ಸದಾಶಿವಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು.
ಸಿಡಿಸಿ ಸದಸ್ಯರಾದ ಕೆ.ರಾಘವೇಂದ್ರ, ಜೋಗಿ ಪ್ರಕಾಶ್, ತಿಪ್ಪೇಶ್ ಮಡಿವಾಳ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಜಿ.ರಮೇಶ್, ಸರ್ಕಾರಿ ಸಂಘದ ಅಧ್ಯಕ್ಷ ಜಿ.ಎನ್ ಈಶ್ವರಪ್ಪ, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ರವೀಂದ್ರ, ಸುಬ್ರಮಣ್ಯ, ಭಾಗವಹಿಸಿದ್ದರು.ಇದೇ ವೇಳೆ ರಾಷ್ಟ್ರೀಯ ಕಬ್ಬಡಿ ಆಟಗಾರರಾದ ಭರತ್, ರಾಕೇಶ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕದಂಬ ಕ್ರೀಡಾ ಸಂಘದಿಂದ ಕ್ರೀಡಾಜ್ಯೋತಿಯನ್ನು ಮೆರವಣಿಗೆಯಲ್ಲಿ ತರಲಾಯಿತು.