ಸಾರಾಂಶ
ಕಾಲಕಾಲಕ್ಕೆ ಸಿಬ್ಬಂದಿಗಳು ಆರೋಗ್ಯದ ತಪಾಸಣೆಯಿಂದ ಉತ್ತಮ ಆರೋಗ್ಯವಾಗಿದ್ದರೇ, ಪಂಚಾಯತ ರಾಜ್ಯ ಇಲಾಖೆಯ ವ್ಯಾಪ್ತಿಯ ಸೇವೆಯ ಎಲ್ಲಾ ಸಮೂದಾಯವೂ ಆರೋಗ್ಯಕರವಾಗಿರುತ್ತದೆ ಎಂದು ಜಿ.ಪಂ. ಸಿಇಓ ಅಕ್ಷಯ ಶ್ರೀಧರ ಹೇಳಿದರು.
ಶಿಗ್ಗಾಂವಿ: ಕಾಲಕಾಲಕ್ಕೆ ಸಿಬ್ಬಂದಿಗಳು ಆರೋಗ್ಯದ ತಪಾಸಣೆಯಿಂದ ಉತ್ತಮ ಆರೋಗ್ಯವಾಗಿದ್ದರೇ, ಪಂಚಾಯತ ರಾಜ್ಯ ಇಲಾಖೆಯ ವ್ಯಾಪ್ತಿಯ ಸೇವೆಯ ಎಲ್ಲಾ ಸಮೂದಾಯವೂ ಆರೋಗ್ಯಕರವಾಗಿರುತ್ತದೆ ಎಂದು ಜಿ.ಪಂ. ಸಿಇಓ ಅಕ್ಷಯ ಶ್ರೀಧರ ಹೇಳಿದರು. ತಾಲೂಕು ಪಂಚಾಯತಿ ಆವರಣದ ಸಭಾಭವನದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅರಿವು, ತಾಲೂಕು ಪಂಚಾಯತಿ ,ಜಿ.ಪಂ., ಹಾವೇರಿ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯವಿದ್ದರೆ ಉತ್ತಮ ಸಮೂದಾಯ ರಚಿಸಬಹುದು. ನಾವಿರುವ ಪರಿಸರ, ಆಹಾರ ಸ್ವಚ್ಛತೆ , ಮೂಲಕ ದೈಹಿಕ ಆರೋಗ್ಯ ಬಲಪಡಿಸಿಕೊಳ್ಳಬಹುದು. ಕಾಲಕಾಲಕ್ಕೆ ಆರೋಗ್ಯ ತಪಾಸಣೆಯಿಂದ ಆರೋಗ್ಯ ಹೊಂದಬಹುದು. ಅಲ್ಲದೇ ತಂಬಾಕು ಸೇವೆನೆಯಂತಹ ಮುಂಜಾಗ್ರತಾ ಕಾರ್ಯಗಳಿಂದ ಬಾಯಿಯ ಹಾನಿಕಾರಕ ಚಟುವಟಿಕೆಯನ್ನು ನಿಯಂತ್ರಿಸಬಹುದಾಗಿದೆ. ಮನುಷ್ಯನಿಗೆ ಉತ್ತಮ ಬದುಕು ಸಾಗಿಸಲು ಆರೋಗ್ಯ ಬಹಳ ಮುಖ್ಯವೆಂದ ಅವರು ಆರೋಗ್ಯ ಶಿಬಿರದ ಲಾಭ ಪಡೆಯಲು ಸೂಚಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ. ವಿಶ್ವನಾಥ ಪ್ರಾಸ್ತಾವಿಕ ಮಾತನಾಡಿ, ಪಂಚಾಯತ ರಾಜ್ಯ ಇಲಾಖೆಯ ಅಧಿಕಾರಿಗಳ ಕಾಳಜಿಯಿಂದಾಗಿ ಸಿಬ್ಬಂದಿ ಆರೋಗ್ಯ ತಪಾಸಣಾ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಶಿಬಿರದ ಉತ್ತಮ ಲಾಭ ಪಡೆಯಬೇಕೆಂದರು.ಧಾರವಾಡ ಧರ್ಮಸ್ಥಳ ಮಂಜುನಾಥೇಶ್ವರ ದಂತ ಚಿಕಿತ್ಸಾ ಮಹಾವಿದ್ಯಾಲಯದ ವೈದ್ಯರಾದ ಡಾ. ಹೇಮಾ, ಜಿಲ್ಲಾ ದಂತ ವೈದ್ಯಾಧಿಕಾರಿ ಡಾ. ಕಲ್ಪನಾ ನೇತೃತ್ವದಲ್ಲಿ ೧೬೦ಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ದಂತ ಸುಧಾರಣಾ ಹಾಗೂ ಆರೋಗ್ಯ ಚಿಕಿತ್ಸೆ ನೆರವೇರಿಸಿದರು.ರಾಷ್ಟ್ರೀಯ ಗ್ರಾಮೀಣ ತಾಲೂಕು ಆರೋಗ್ಯ ಇಲಾಖೆಯ ಡಾ. ಸತೀಶ ಹಾಗೂ ಡಾ. ವಿದ್ಯಾ ಅವರು ಸಿಬ್ಬಂದಿಗಳ ಶಿಬಿರದ ಕಾರ್ಯ ನಡೆಸಿದರು. ಸಹಾಯಕ ನಿರ್ದೇಶಕ ಪ್ರಕಾಶ ಔಂದಕರ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕಿ ಭಾರತೀ ಪಾಟೀಲ, ಸಿಎಂ ಕೋರಿ, ನೃಪತಿ ಬೂಸರೆಡ್ಡಿ, ಸುರೇಶ ತಗ್ಗಿಹಳ್ಳಿ, ರಾಯಪ್ಪ ನಾಗಪ್ಪನವರ ಅಲ್ಲದೇ ತಾಪಂ ಸಿಬ್ಬಂದಿಗಳಿದ್ದರು.