ಆರೋಗ್ಯ ಸ್ನೇಹಿ ಸೇವೆ ಅಲಯನ್ಸ್ ಸಂಸ್ಥೆ ಧ್ಯೇಯ: ಡಾ.ನಾಗರಾಜು ವಿ.ಭೈರಿ

| Published : Dec 29 2024, 01:18 AM IST

ಆರೋಗ್ಯ ಸ್ನೇಹಿ ಸೇವೆ ಅಲಯನ್ಸ್ ಸಂಸ್ಥೆ ಧ್ಯೇಯ: ಡಾ.ನಾಗರಾಜು ವಿ.ಭೈರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಆರಂಭಗೊಂಡು ಕೇವಲ 8 ತಿಂಗಳು ಕಳೆದಿದೆ. 26 ಅಲಯನ್ಸ್ ಸಂಸ್ಥೆಗಳು ವಿವಿಧ ಸೇವಾ ಕಾರ್ಯಗಳನ್ನು ಮಾಡಿ ವರದಿ ಸಮರ್ಪಿಸಿವೆ. ಆರೋಗ್ಯ, ಪರಿಸರ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ರಾಷ್ಟ್ರೀಯ - ಅಂತ ರಾಷ್ಟ್ರೀಯ ದಿನಾಚರಣೆಗಳಲ್ಲಿ ಜಾಗೃತಿ ಮತ್ತು ಅಭಿನಂದನೆ, ಪ್ರೋತ್ಸಾಹ ಅಭಿಯಾನ ಮಾಡಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಗತ್ಯಯುಳ್ಳವರಿಗೆ ಆರೋಗ್ಯಸ್ನೇಹಿ ಸೇವೆ ನೀಡುವುದು ಅಲಯನ್ಸ್ ಸಂಸ್ಥೆ ಪ್ರಮುಖ ಧ್ಯೇಯವಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.

ನಗರದ ಸಿಪಾಯಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪ್ರಗತಿ ಅಭಿಯಾನ ಮತ್ತು ಸೇವಾ ಚಟುವಟಿಕೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಆರಂಭಗೊಂಡು ಕೇವಲ 8 ತಿಂಗಳು ಕಳೆದಿದೆ. 26 ಅಲಯನ್ಸ್ ಸಂಸ್ಥೆಗಳು ವಿವಿಧ ಸೇವಾ ಕಾರ್ಯಗಳನ್ನು ಮಾಡಿ ವರದಿ ಸಮರ್ಪಿಸಿವೆ. ಆರೋಗ್ಯ, ಪರಿಸರ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ರಾಷ್ಟ್ರೀಯ - ಅಂತ ರಾಷ್ಟ್ರೀಯ ದಿನಾಚರಣೆಗಳಲ್ಲಿ ಜಾಗೃತಿ ಮತ್ತು ಅಭಿನಂದನೆ, ಪ್ರೋತ್ಸಾಹ ಅಭಿಯಾನ ಮಾಡಿರುವುದು ಶ್ಲಾಘನೀಯ ಎಂದರು.

ಮುಂದಿನ ದಿನಗಳಲ್ಲಿ ಸಂಸ್ಥೆಯ ವಿವಿಧ ಸಂಸ್ಥೆಗಳು ಮತ್ತಷ್ಟು ಸೇವಾ ಕಾರ್ಯ, ಸಮಾಜಮುಖಿ ಅಭಿಯಾನ ಅಳವಡಿಸಿಕೊಳ್ಳಲಿವೆ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಲಿದ್ದಾರೆ ಎಂದರು.

ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, 23 ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಸಹಕಾರದಿಂದ ಮುನ್ನಡೆಯುತ್ತಿದೆ. ನಮ್ಮ ರಾಜ್ಯಪಾಲರ ಅವಧಿ 3 ತಿಂಗಳು ಇದೆ. ಅಷ್ಟರಲ್ಲಿ ಮತ್ತಷ್ಟು ಸೇವಾಕಾರ್ಯಗಳನ್ನು ಮಾಡಲು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಅವಾರ್ಡ್ ಸಮಾರಂಭ, ಮಾ. 21, 22, 23ರಂದು 3 ದಿನ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸಮ್ಮೇಳನ ಆಯೋಜನೆಗೊಂಡಿದೆ. 26 ದೇಶಗಳಿಂದ ಅಲಯನ್ಸ್ ಸಂಸ್ಥೆ ಪ್ರತಿನಿಧಿಗಳು ಆಗಮಿಸುತ್ತಾರೆ. ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.ಡಿ.29ರಂದು ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಸಂಸ್ಥೆಯಿಂದ ಆಯೋಜಿಸಲಾಗಿದೆ. ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಜ.5ರಂದು ಕರ್ನಾಟಕ ಸಂಘದಲ್ಲಿ ಅಲಯನ್ಸ್ ತಂಡಗಳಿಗೆ ಲೋಗೋ ನೀಡುವುದು ಮತ್ತು ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ವಿತರಣೆ ಮತ್ತು ದೇಹದಾರ್ಡ್ಯ ಸ್ಪರ್ಧೆಯ ಮಿಸ್ಟರ್ ಮಂಡ್ಯ ಪ್ರತಿಭೆಗೆ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯಪಾಲರ ಸೇವಾ ಡೈರಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಉಪರಾಜ್ಯಪಾಲರಾದ ಶಶಿಧರ್‌ ಈಚಗೆರೆ, ಮಾದೇಗೌಡ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ರಕ್ಷಿತ್‌ರಾಜ್, ಪಿಆರ್‌ಒ ಅಪ್ಪಾಜಿ ಮತ್ತಿತರರಿದ್ದರು.