ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಅವಶ್ಯ: ಡಾ.ಪಾಟೀಲ

| Published : Mar 13 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಇದನ್ನು ಪಡೆಯಲು ಸರಳ ಮತ್ತು ಎಲ್ಲರೂ ಮಾಡಬಹುದಾದ ಸುದರ್ಶನ ಕ್ರಿಯೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ ಎಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಡಾ.ಬಿ.ಎಂ.ಪಾಟೀಲ್ ಗುರೂಜಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಇದನ್ನು ಪಡೆಯಲು ಸರಳ ಮತ್ತು ಎಲ್ಲರೂ ಮಾಡಬಹುದಾದ ಸುದರ್ಶನ ಕ್ರಿಯೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ ಎಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಡಾ.ಬಿ.ಎಂ.ಪಾಟೀಲ್ ಗುರೂಜಿ ಹೇಳಿದರು.

ನಗರದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಆರ್ಟ್ ಆಫ್ ಲಿವಿಂಗ್ ಮತ್ತು ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 6 ದಿನಗಳು ಜರುಗಿದ ಸಂತಸದ ಕಾರ್ಯಕ್ರಮ ಮತ್ತು ಸುದರ್ಶನ ಕ್ರಿಯೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಒತ್ತಡದ ಜೀವನ ಹಾಗೂ ಬದಲಾದ ಆಹಾರ ಪದ್ಧತಿಯಿಂದಾಗಿ, ಮನುಷ್ಯರು ಅನೇಕ ರೀತಿಯ ಕಾಯಿಲೆಗಳು ಹಾಗೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೊರಬರಲು ಪ್ರತಿನಿತ್ಯ ಸುದರ್ಶನ ಕ್ರಿಯೆ ಹಾಗೂ ಸಾವಯವ ಕೃಷಿಯಿಂದ ಬೆಳೆದ ಆಹಾರ ಸೇವನೆ ಮಾಡುವ ಮೂಲಕ ಎಲ್ಲರೂ ಸಂತೃಪ್ತಿ ಜೀವನ ನಡೆಸಬಹುದಾಗಿದೆ ಎಂದರು.

ಜಿಲ್ಲಾ ಅಭಿವೃದ್ಧಿ ಕಮಿಟಿ ಸದಸ್ಯ ಡಾ.ರವೀಂದ್ರ ಬೆಳ್ಳಿ, ರಮೇಶ ಮಸಬಿನಾಳ, ಗುಳೇದ, ಪ್ರವೀಣ್ ಹುಗ್ಗಿ, ಸುರೇಶ ಮತ್ತು ಗೀತಾ ದೇಸಾಯಿ ಮಾತನಾಡಿದರು. ಶಿಬಿರಾರ್ಥಿಗಳಾದ ರವೀಂದ್ರ ಬುದ್ನಿಮಠ, ಆರ್.ಆರ್.ಲೂನಾರಿ, ಮಹಾದೇವಯ್ಯ ಗಚ್ಚಿನಮಠ, ಪ್ರಿಯಾ ಪಾಟೀಲ, ಸರೋಜಿನಿ ತಮ್ಮ ಅನುಭವ ಹಂಚಿಕೊಂಡರು. ನಿಂಗಣ್ಣ ಮಸೂತಿ, ಚಂದ್ರಶೇಖರ್ ಸಿಂಧೂರ, ಶಾಂತಗೌಡ, ಮಾಳಪ್ಪ ಪೂಜಾರಿ, ಮಂಜುಳಾ ಪಾಟೀಲ, ಸಹನಾ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.