- ಬೃಹತ್ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪತಂಜಲಿ ಯೋಗ ಸಮಿತಿಯ ಧ್ಯೇಯ ಮನೆ ಮನೆಯಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸುವುದಾಗಿದೆ ಎಂದು ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದರು.ಮಂಗಳವಾರ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಮ್ಮ ಸಂಸ್ಥೆ ಆರೋಗ್ಯವೇ ಭಾಗ್ಯ ಎಂಬ ಧ್ಯೇಯವನ್ನು ಹೊಂದಿದೆ. ಅದಕ್ಕಾಗಿ ಯೋಗ ತರಬೇತಿ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ವೈದ್ಯ ರಾಜಕುಮಾರ್ ಮಾತನಾಡಿ, ಉಚಿತ ಆರೋಗ್ಯ ಶಿಬಿರ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಎಷ್ಟೋ ಜನರಿಗೆ ವೈದ್ಯರ ಬಳಿಗೆ ಹೋಗುವುದಕ್ಕೆ, ಸಣ್ಣ ಸಣ್ಣ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದಕ್ಕೂ ಆರ್ಥಿಕ ಸಮಸ್ಯೆ ಇದ್ದು, ಇಂತಹವರಿಗೆ ಈ ಶಿಬಿರ ಪ್ರಯೋಜನಕಾರಿ ಆಗಲಿದೆ ಎಂದರು.
ಸಂಸ್ಥೆಯ ಖಜಾಂಚಿ ಶ್ರೀಕಾಂತ್ ಕುರ್ಡೇಕರ್ ಅವರು ಪತಂಜಲಿ ಯೋಗ ಸಮಿತಿ ನಡೆದುಕೊಂಡು ಬಂದ ಹಾದಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ 45ಕ್ಕೂ ಹೆಚ್ಚು ತಜ್ಞ ವೈದ್ಯರ ತಂಡ ಹಾಗೂ ವೈದ್ಯಕೀಯ ಸಿಬ್ಬಂದಿ ಮಧುಮೇಹ, ಹೃದಯ, ಮೂಳೆ, ಕಿವಿ, ಮೂಗು, ಗಂಟಲು, ಕಣ್ಣು, ಚರ್ಮ ರೋಗ, ದಂತ ರೋಗ, ಮಕ್ಕಳ ಆರೋಗ್ಯದ ಬಗ್ಗೆ ಶಿಬಿರಕ್ಕೆ ಬಂದ ಜನರಿಗೆ ತಪಾಸಣೆ ಮಾಡಿದರು.
ಸಮಾರಂಭದಲ್ಲಿ ಮೂಳೆ ತಜ್ಞರಾದ ಡಾ.ಸುರೇಶ್ ತುಗ್ಗಲಹಳ್ಳಿ, ಮಕ್ಕಳ ತಜ್ಞರಾದ ಡಾ.ವೇಣುಗೋಪಾಲ್, ಸ್ವರಾಜ್ ಶ್ರೀ ವಾಸವಾಂಬ ಟ್ರ್ಯಾಕ್ಟರ್ ಏಜೆನ್ಸಿ ಮಾಲೀಕರಾದ ವಿನಾಯಕ ಶೆಟ್ರು, ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷರಾದ ರಾಘವೇಂದ್ರ ವೈಶ್ಯರ್, ಸುಜಾತ ಬೆನ್ನೂರು ಮಠ, ಕಾರ್ಯದರ್ಶಿ ಎಂ.ಬಿ. ರುದ್ರೇಶ್, ಜಗದೀಶ್ ಆಚಾರ್, ಸುರೇಶ್ ಕುಂಬಾರ್, ಜಕ್ಕಾಳಿ ಚನ್ನೇಶ್, ಬಿವಿಎಸ್ ನ ನಿರ್ದೇಶಕರಾದ ಎಚ್.ಎಂ. ಅರುಣ್‌ಕುಮಾರ್, ಕುಂಕೋವ ಹಾಲೇಶ್, ಅಂಬಿಕಾ ಹೆಬ್ಬಾರ್, ಪಂಕಜಾಕ್ಷಿ, ಸುಧಾ, ಶೀಲಾ, ವಿದ್ಯಾ ಇತರರು ಭಾಗವಸಿದ್ದರು.- - -
-26ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಪಟ್ಟಣದ ಬಿವಿಎಸ್ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ವೈದ್ಯ ರಾಜಕುಮಾರ್ ಉದ್ಘಾಟಿಸಿದರು.