ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಚೆನ್ನಾಗಿರಬೇಕು: ಲಕ್ಷ್ಮಮ್ಮ ಬೋರೇಗೌಡ

| Published : Dec 02 2024, 01:20 AM IST

ಸಾರಾಂಶ

ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಚೆನ್ನಾಗಿರಬೇಕು. ಇದರಿಂದ ಏನಾದರೂ ಸಾಧಿಸಬಹುದು. ಆರೋಗ್ಯ ಇಲ್ಲದಿದ್ದರೆ ಬೇರೇ ಕಡೆ ಗಮನ ಬರುವುದಿಲ್ಲ. ಹಣ ಆಸ್ತಿ ಎನ್ನುವ ಬದಲು ತಮ್ಮ ಆರೋಗ್ಯ ದ ಕಡೆ ಗಮನ ಹರಿಸಬೇಕು. ಮನುಷ್ಯನ ದೇಹಕ್ಕೆ ಮುಖ್ಯವಾಗಿ ಕಣ್ಣು ಅಗತ್ಯ. ಕಣ್ಣು ತಪಾಸಣೆಗೆ ಸಾರ್ವಜನಿಕರು ಒಳಗಾಗಿ ಶಿಬಿರದ ಪ್ರಯೋಜನ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಇರುವ ಶ್ರೀಮಹಾಕಾಳಿ ದೇವಾಲಯದ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಶ್ರೀಗುರುದೇವ ಮಹಾಕಾಳಿ ಭೈರವಾಶ್ರಮ, ಅಲೆಯನ್ಸ್ ಇಂಟರ್ ನ್ಯಾಷನಲ್ ಕ್ಲಬ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಶಿಬಿರಕ್ಕೆ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಮ್ಮ ಬೋರೇಗೌಡ ಚಾಲನೆ ನೀಡಿದರು.

ಶ್ರೀಗುರುದೇವ ಮಹಾಕಾಳಿ ಭೈರವಾಶ್ರಮದ ಸಂಸ್ಥಾಪಕ ಅಧ್ಯಕ್ಷ ಶ್ರೀ ಗುರುದೇವ ಸ್ವಾಮೀಜಿ ದಿವ್ಯ ಸಾನಿಧ್ಯಯ ವಹಿಸಿ ಮಾತನಾಡಿ, ಪ್ರತಿವರ್ಷ ಈ ಭಾಗದ ಜನರ ಅನುಕೂಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.

ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಚೆನ್ನಾಗಿರಬೇಕು. ಇದರಿಂದ ಏನಾದರೂ ಸಾಧಿಸಬಹುದು. ಆರೋಗ್ಯ ಇಲ್ಲದಿದ್ದರೆ ಬೇರೇ ಕಡೆ ಗಮನ ಬರುವುದಿಲ್ಲ. ಹಣ ಆಸ್ತಿ ಎನ್ನುವ ಬದಲು ತಮ್ಮ ಆರೋಗ್ಯ ದ ಕಡೆ ಗಮನ ಹರಿಸಬೇಕು. ಮನುಷ್ಯನ ದೇಹಕ್ಕೆ ಮುಖ್ಯವಾಗಿ ಕಣ್ಣು ಅಗತ್ಯ. ಕಣ್ಣು ತಪಾಸಣೆಗೆ ಸಾರ್ವಜನಿಕರು ಒಳಗಾಗಿ ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದರು.

ಈ ವೇಳೆ ಗ್ರಾಪಂ ಸದಸ್ಯರಾದ ಸುನೀತಾ ರೇವಣ್ಣ, ನಾಗರಾಜು, ಶರತ್, ಗ್ರಾಮದ ಮುಖಂಡರು, ಟಿ.ಎಂ.ಹೊಸೂರು ಗ್ರಾಮದ ಮುಖಂಡ ಮಹದೇವ್ ಸೇರಿದಂತೆ ಇತರ ದೇವಾಲಯದ ಭಕ್ತರು ಸಿಬ್ಬಂದಿ ಹಾಜರಿದ್ದರು.