ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯ ಪಡೆದು ಉತ್ತಮ ವೃತ್ತಿ ಪಡೆಯುವ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದುವುದು ಅತೀ ಮುಖ್ಯ.

ಕೊಪ್ಪಳ:

ಆರೋಗ್ಯಯುತ ಜೀವನ ಸಹ ಒಂದು ಕಲೆಯಾಗಿದೆ. ಮಾನಸಿಕ ಒತ್ತಡ ಇಲ್ಲದೆ ಮತ್ತು ಸವಾಲು ಎದುರಿಸುವುದು ಬಹುದೊಡ್ಡ ಜೀವನದ ಕಲೆಯಾಗಿದೆ ಎಂದು ಪ್ರೊ. ಕೆ.ವಿ. ಪ್ರಸಾದ ಹೇಳಿದರು.

ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ಘಟಕ ಮತ್ತು ಜಿಲ್ಲಾ ಏಡ್ಸ್ ತಡೆಗೆಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ‘ಆರೋಗ್ಯಕರ ಜೀವನವನ್ನು ನಡೆಸುವ ಕಲೆ’ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯ ಪಡೆದು ಉತ್ತಮ ವೃತ್ತಿ ಪಡೆಯುವ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದುವುದು ಅತೀ ಮುಖ್ಯ ಎಂದು ಹೇಳಿದರು.

ಜಿಲ್ಲಾ ಏಡ್ಸ್ ತಡೆಗೆಟ್ಟುವಿಕೆ ಮತ್ತು ನಿಯಂತ್ರಣಾಧಿಕಾರಿ ಡಾ. ಶಶಿಧರ ಎ., ಲೈಂಗಿಕ ರೋಗಗಳ ಕುರಿತು ಮಾತನಾಡಿ, ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಅಮೂಲ್ಯವಾದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.

ಡಾ. ಆನಂದ ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳಿಗೆ ಆರೋಗ್ಯವಾಗಿರಲು ಆಹಾರದ ಮಹತ್ವ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಡಾ. ಸುರೇಶ ಹಕ್ಕಂಡಿ ಮಾತನಾಡಿ, ಯುವಕರು ಜಾಗತಿಕ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಬಳಸಿ ಅರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಚನ್ನಬಸವ, ಯುವ ಪೀಳಿಗೆ ತಮ್ಮ ಜವಾಬ್ದಾರಿ ಅರಿತು ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬಾಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿಗಳಾದ ಶರಣಪ್ಪ ಚವ್ಹಾಣ, ಡಾ. ಜಾಲಿಹಾಳ ಶರಣಪ್ಪ, ಉಪಪ್ರಾಚಾರ್ಯ ಡಾ. ಕರಿಬಸವೇಶ್ವರ ಬಿ. ಹಾಗೂ ಐಕ್ಯೂಎಸಿ ಸಂಯೋಜಕ ಡಾ. ಅರುಣಕುಮಾರ, ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲಿ, ಡಾ. ಮಂಜುನಾಥ ಗಾಳಿ, ಡಾ. ಮಂಜುನಾಥ ಎಂ, ಡಾ. ನಾಗರಾಜ ದಂಡೋತಿ, ಡಾ. ಶಶಿಕಾಂತ ಉ, ಶೀದೇವಿ, ಡಾ. ಪ್ರಶಾಂತ ಕೆ, ಡಾ. ಸುಂದರ ಮೇಟಿ, ಶ್ರೀ ಮಹೇಶ್ ಬಿರಾದಾರ, ಸುಮಲತಾ ಬಿ.ಎಂ. ಮತ್ತಿತರು ಉಪಸ್ಥಿತರಿದ್ದರು.