ಯಲಬುರ್ಗಾ: ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠವಾಗಿದ್ದು, ಆರೋಗ್ಯವಂತ ಜನರು ರಕ್ತದಾನ ಮಾಡುವ ಮೂಲಕ ಪುಣ್ಯದ ಕಾರ್ಯಕ್ಕೆ ಮುಂದಾಗಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ತಾಲೂಕಾಧ್ಯಕ್ಷ ಡಾ. ಶಿವನಗೌಡ ದಾನರಡ್ಡಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ಹಡಪದ ಸಮಾಜದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಜ್ಯಮಟ್ಟದಲ್ಲಿಯೇ ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆ ರಕ್ತ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಸ್ವಯಂ ಪ್ರೇರಿತವಾಗಿ ಇಂತಹ ಶಿಬಿರಗಳಲ್ಲಿ ರಕ್ತ ಕೊಡುವ ಮೂಲಕ ಜೀವನ ಉಳಿಸಲು ಸಾಧ್ಯ ಎಂದರು.
ಸಂಸ್ಥೆ ಸಂಯೋಜಕ ದೇವಿಂದ್ರಪ್ಪ ಹಿಟ್ನಾಳ ಮಾತನಾಡಿದರು. 40ಕ್ಕೂ ಅಧಿಕ ಜನರು ರಕ್ತದಾನ ನೀಡಿದರು. ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಈ ಸಂದರ್ಭ ಪಪಂ ಮುಖ್ಯಾಧಿಕಾರಿ ನಾಗೇಶ, ಹಡಪದ ಸಮಾಜದ ಅಧ್ಯಕ್ಷ ವೀರಣ್ಣ ಬಳೂಟಗಿ, ಶರಣಪ್ಪ ಗಾಂಜಿ, ಶಿವಪ್ಪ ಶಾಸ್ತ್ರಿ, ಆನಂದ ಉಳ್ಳಾಗಡ್ಡಿ, ಮಹಾದೇವಪ್ಪ ಹಡಪದ, ಶಿವಾನಂದ ಬಣಕಾರ, ಎಂ.ಎಫ್. ನದಾಫ್, ವಿರೇಶ ಹಡಪದ, ಸಂಗಣ್ಣ ತೆಂಗಿನಕಾಯಿ, ಈಶ್ವರ ಅಟಮಾಳಗಿ, ಸುರೇಶ ಹಡಪದ, ಪ್ರಭುರಾಜ ಹಡಪದ, ಸಿದ್ದು ಹಡಪದ, ಬಾಳಪ್ಪ ಹಡಪದ, ನೀಲಪ್ಪ ತಳಕಲ್ ಇತರರು ಇದ್ದರು.