ಸಾರಾಂಶ
ಹಾನಗಲ್ಲ: ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲದ ಎನ್ಎಸ್ಎಸ್ ವಿಶೇಷ ಶಿಬಿರ ಅರಳೇಶ್ವರದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 24 ಜನ ರಕ್ತದಾನ ಮಾಡಿದರು.ಗ್ರಾಮ ಪಂಚಾಯಿತಿ ಪಿಡಿಒ ಅಶೋಕ್ ಇಂದೂರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಕೊಟ್ರಪ್ಪ ಶಂ. ಅಂಗಡಿ ಹಾಗೂ ಬಿಇಡಿಯ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಮತ್ತು ಮಹಿಳೆಯರು ರಕ್ತದಾನ ಮಾಡಿದರು.ರೆಡ್‌ಕ್ರಾಸ್ ಘಟಕದ ಯೋಜನಾಧಿಕಾರಿ ಪ್ರೊ. ದಿನೇಶ್ ಆರ್. ಮಾತನಾಡಿ, ರಕ್ತದಾನ ವಿಶೇಷ ದಾನ. ಆರೋಗ್ಯಯುತ ವ್ಯಕ್ತಿ ರಕ್ತದಾನವನ್ನು ಮಾಡುವುದರಿಂದ ಆರೋಗ್ಯವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬಹುದು. ನಿಯಮಿತವಾಗಿ ಆರೋಗ್ಯಯುತ ವ್ಯಕ್ತಿ ರಕ್ತದಾನವನ್ನು ಮಾಡಬೇಕು ಎಂದರು.ಹಾವೇರಿ ಜಿಲ್ಲಾ ರಕ್ತಕೇಂದ್ರ ಘಟಕದಿಂದ ಬಸವರಾಜ್ ಕಮತದ ಹಾಗೂ ಡಾ. ಸುದೀಪ, ಸಂತೋಷ ಕಲಾಲ, ಅರಳೇಶ್ವರದ ವೈದ್ಯಾಧಿಕಾರಿ, ಡಾ. ದಿವ್ಯಾ ಪಿ. ಆಗಮಿಸಿದ್ದರು.ಎನ್ಎಸ್ಎಸ್ ಸಂಚಾಲಕ ಡಾ. ವಿಶ್ವನಾಥ ಬೊಂದಾಡೆ, ಕರಬಸಪ್ಪ ಗೊಂದಿ, ಡಾ. ಪ್ರಕಾಶ್ ಹುಲ್ಲೂರ್, ಮಹೇಶ ಅಕ್ಕಿವಳ್ಳಿ, ಡಾ. ಜಿತೇಂದ್ರ ಜಿ.ಟಿ., ಡಾ. ಹರೀಶ್ ಟಿ. ತಿರುಕಪ್ಪ, ಪ್ರಾಚಾರ್ಯ ಸದಾಶಿವಪ್ಪ ಎನ್., ಡಾ. ಪ್ರಕಾಶ್ ಜಿ.ವಿ., ಕೆ.ಟಿ. ಕಲಗೌಡ್ರ, ಚಂದ್ರಶೇಖರ್ ಗೂಳಿ ಅರಳೇಶ್ವರ ಗ್ರಾಮ ಪಂಚಾಯಿತಿಯ ಸದಸ್ಯರಾದ ಜಯಂತಿ ಶೇ. ವಡ್ಲಣ್ಣನವರ್, ಶಶಿಕಲಾ ಚ. ಹಂಚಿನಮನಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಯಶೋಧ ಸೋ. ದೊಡ್ಡಗೌಡರ್, ರೇಖಾ ಕ. ಚಿಕ್ಕೇರಿ, ಶಿಬಿರದ ಪ್ರತಿನಿಧಿಗಳಾದ ನಿಖಿಲ್ ಬನ್ನೆ, ಕವಿತಾ ಕೊಳಲು, ರುದ್ರಗೌಡ ದೊಡ್ಡಗೌಡ್ರ, ನಾಗಲಕ್ಷ್ಮಿ ಬೇವಿನಮರದ ಉಪಸ್ಥಿತರಿದ್ದರು.ಪರಿಣಾಮಕಾರಿ ಸಾರ್ವಜನಿಕ ಭಾಷಣ ತರಬೇತಿ ಶಿಬಿರ
ಸವಣೂರು: ವೇದಿಕೆಯಲ್ಲಿ ವಿದ್ಯಾರ್ಥಿಗಳು ಮಾತನಾಡುವ ಮೂಲಕ ಉತ್ತಮ ವಾಗ್ಮಿಗಳಾಗಿ ಹೊರಹೊಮ್ಮಲು ಇಂತಹ ತರಬೇತಿ ಶಿಬಿರಗಳು ಸ್ಥಳೀಯವಾಗಿ ಅವಶ್ಯವಾಗಿವೆ ಎಂದು ತರಬೇತಿದಾರ ಜೆಸಿ ನಿವೇದಿತಾ ವಿಕಾಸ ತಿಳಿಸಿದರು.ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ಏರ್ಪಡಿಸಿದ್ದ ಏಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್(ಪರಿಣಾಮಕಾರಿ ಸಾರ್ವಜನಿಕ ಭಾಷಣ) ಒಂದು ದಿನದ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಜೆಸಿಐ ನಮ್ಮ ಸವಣೂರು ತಂಡ ಕೇವಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗದೇ, ಸರ್ವರಿಗೂ ಉಪಯುಕ್ತ ಮಾಹಿತಿಯನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಸಿಐ ತರಬೇತಿದಾರರಾದ ಜೆಸಿ ನಿವೇದಿತಾ ವಿಕಾಸ ಹಾಗೂ ಜೆಸಿ ವಿದ್ಯಾಧರ ಕುತನಿ ಅವರು ತರಬೇತಿ ನೀಡಿ ಸನ್ಮಾನ ಸ್ವೀಕರಿಸಿದರು.ಹಿರಿಯ ಜೆಸಿ ಶ್ರೀಪಾದಗೌಡ ಪಾಟೀಲ, ಕಾರ್ಯದರ್ಶಿ ಜೆಸಿ ಹರೀಶ ಹಿರಳ್ಳಿ, ಪದಾಧಿಕಾರಿಗಳಾದ ಯೋಗೇಂದ್ರ ಜಂಬಗಿ, ರಮೇಶ ಅರಗೋಳ, ಡಾ. ಪರಶುರಾಮ ಹೊಳಲ, ಬಸನಗೌಡ ಪಾಟೀಲ, ಗಣೇಶಗೌಡ ಪಾಟೀಲ, ಬಾಪುಗೌಡ ಕೊಪ್ಪದ, ಪುಷ್ಪಾ ಬತ್ತಿ, ಡಾ. ಸವಿತಾ ಮುರಡಿ, ಸುನಂದಾ ಚಿನ್ನಾಪೂರ, ಪ್ರೇಮಾ ಚಳ್ಳಾಳ, ಲಲಿತಾ ಅಪ್ಪಣ್ಣನವರ, ಶೈಲಾ ಮುದಗಲ್ ಇತರರು ಪಾಲ್ಗೊಂಡಿದ್ದರು.