ತುಮಕೂರು: ಪಾಕಿಸ್ತಾನಕ್ಕೆ ವಾಪಸ್ ಕಳಿಸುವ ವಿಚಾರ ಕೇಳಿ ಅಸ್ಲಾಂ ಪಾಷ ಎಂಬುವರ ತಾಯಿಗೆ ಹೃದಯಾಘಾತವಾಗಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ..ಘಟನೆ ಸಂಬಂಧ ಅಸ್ಲಾಂ ಪಾಷ ಅವರ ಚಿಕ್ಕಪ್ಪ ಮಹಮದ್ ವಸಿ ಪಾಷ ಮಾತನಾಡಿ, ತುಮಕೂರಿನ ಪಿ.ಎಚ್. ಕಾಲೋನಿಯಲ್ಲಿ ವಾಸವಾಗಿರುವ ನನ್ನ ಅಣ್ಣನ ಮಗ ಅಸ್ಲಾಂಪಾಷ ಅವರು 20 ವರ್ಷದ ಹಿಂದೆ ಫೈಸಾ ಎಂಬ ಪಾಕ್ ಯುವತಿಯನ್ನು ಮದುವೆ ಮಾಡಿಕೊಂಡಿದ್ದರು. ಇವರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಸಂಬಂಧಿಕರಿದ್ದಾರೆ. ಅಲ್ಲದೇ ಅಸ್ಲಾಂ ಪಾಷನ ಅಕ್ಕನನ್ನುಪಾಕಿಸ್ತಾನದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿದೆ.ಅಸ್ಲಾಂ ಪಾಷಗೆ 3 ಮಂದಿ ಮಕ್ಕಳಿದ್ದಾರೆ. ಐದಾರು ತಿಂಗಳ ಹಿಂದೆ ಎಸ್ಪಿ ಕಚೇರಿಯಿಂದ ನ್ಯಾಷಿನಾಲಿಟಿ ಬಂದಿದೆ ಅಂತ ತಿಳಿಸಿದ್ದರು. ಆಗ ಎಸ್ಪಿ ಕಚೇರಿಗೆ ಹೋಗಿ ಸಹಿ ಹಾಕಿದ್ದಾರೆ. ಎರಡು ದಿವಸದ ಹಿಂದೆ ಪೊಲೀಸರು ಬಂದು ಮಾಹಿತಿ ಪಡೆದಿದ್ದರು ಎಂದರು. ಅಸ್ಲಾಂ ಪಾಷ ತಾಯಿಗೆ ಹೃದಯಾಘಾತವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಕಿಸ್ತಾನಕ್ಕೆ ಕಳಿಸುತ್ತಾರೆಂದು ಹೃದಯಾಘಾತ
ಇವರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಸಂಬಂಧಿಕರಿದ್ದಾರೆ. ಅಲ್ಲದೇ ಅಸ್ಲಾಂ ಪಾಷನ ಅಕ್ಕನನ್ನುಪಾಕಿಸ್ತಾನದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.