ಸಾರಾಂಶ
ತಾಲೂಕಿನ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಯಲ್ಲಪ್ಪ ಗೋಪಾಲ ಭಜಂತ್ರಿ (೫೧) ಸಾವು.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಯಲ್ಲಪ್ಪ ಗೋಪಾಲ ಭಜಂತ್ರಿ (೫೧) ಕಚೇರಿಯಲ್ಲಿಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಯಲ್ಲಪ್ಪ ಸೋಮವಾರ ಎಂದಿನಂತೆ ಕಚೇರಿಗೆ ಕಾರ್ಯನಿರ್ವಹಿಸಲು ಬಂದಾಗ ಹೃದಯಾಘಾತ ಸಂಭವಿಸಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ. ಕಳೆದ ೨೦ ವರ್ಷಗಳಿಂದ ಮನಗೂಳಿ ಅಂಚೆ ಕಚೇರಿಯಲ್ಲಿ ಜಿಡಿಎಸ್ ಪ್ಯಾಕರ್‌ಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಮನಗೂಳಿ ಪಟ್ಟಣದಲ್ಲಿ ಸಂಜೆ ನೆರವೇರಿತು.ಆರು ತಿಂಗಳ ಹಿಂದೆಯೂ ಯಲ್ಲಪ್ಪಗೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು ಮಾತ್ರೆಯನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರು. ಇವರು ಒಂದೆರಡು ದಿನ ಬಿಟ್ಟು ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಲು ಹೋಗುವವರಿದ್ದರು. ಆದರೆ, ಅಷ್ಟರೊಳಗೆ ಘಟನೆ ಸಂಭವಿಸಿದೆ ಅವರ ಸಂಬಂಧಿ ಶಿವಾನಂದ ಭಜಂತ್ರಿ ಹೇಳಿದರು.