ಸಾರಾಂಶ
ಬಿಜೆಪಿ ಹಿರಿಯ ಮುಖಂಡ ಹಾಗೂ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಧರ್ಮಣ್ಣ ದೊಡಮನಿ ಅವರು ಗುರುವಾರ ಬೆಳಗಿನ ಜಾವ ಕಲಬುರ್ಗಿಯಲ್ಲಿ ವಾಯುವಿಹಾರಕ್ಕೆ ತೆರಳಿದಾಗ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಜೇವರ್ಗಿ
ಬಿಜೆಪಿ ಹಿರಿಯ ಮುಖಂಡ ಹಾಗೂ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಧರ್ಮಣ್ಣ ದೊಡಮನಿ ಅವರು ಗುರುವಾರ ಬೆಳಗಿನ ಜಾವ ಕಲಬುರ್ಗಿಯಲ್ಲಿ ವಾಯುವಿಹಾರಕ್ಕೆ ತೆರಳಿದಾಗ ಹೃದಯಘಾತದಿಂದ ಮೃತಪಟ್ಟಿದ್ದಾರೆ.ಕಳೆದ ವರ್ಷದ ಹಿಂದೆ ದೊಡಮನಿ ಅವರ ಕಾರು ಅಫಘಾತಕೀಡಾಗಿ ಸುಮಾರು ತಿಂಗಳ ಕಾಲ ಕಲಬುರ್ಗಿ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಏರ್ ಲಿಫ್ಟ್ ಮೂಲಕ ಸರ್ಕಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೆಲ್ಲವೂ ಮಾಸುವ ಮುನ್ನವೇ ದೊಡಮನಿ ಅವರು ವಿಧಿವಶರಾಗಿದ್ದು, ಜೇವರ್ಗಿ ತಾಲ್ಲೂಕಿನಲ್ಲಿ ಕರಾಳಛಾಯೆ ಮೂಡಿಸಿದೆ.
ಸರಳ ಸಜ್ಜನಿಕೇಯ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಧರ್ಮಣ್ಣ ದೊಡಮನಿ ಅವರು ಹಿಂದೊಮ್ಮೆ ಮಾಜಿ ಮುಖ್ಯ ಮಂತ್ರಿ ದಿ.ಧರ್ಮಸಿಂಗರ ಎದುರಾಳಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತ ಗೊಂಡಿದ್ದರು. ಬಿಜೆಪಿಯಲ್ಲಿ ಹಿರಿಯ ರಾಜಕಾರಣಿಯಾಗಿ ಪ್ರಾಮಾಣಿಕ ಪಕ್ಷ ನಿಷ್ಠೆ ಹೊಂದಿದ ಧರ್ಮಣ್ಣ ದೊಡಮನಿ ಅವರನ್ನು ಕಳೆದ ಬಿಜೆಪಿ ಸರ್ಕಾದ ಅವಧಿಯಲ್ಲಿ ಹಿರಿತನದ ಆಧಾರದ ಮೇಲೆ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು.ಮೃತರ ಅಂತ್ಯ ಕ್ರಿಯೆ ಧರ್ಮಣ್ಣ ದೊಡಮನಿ ಅವರ ಸ್ವಗ್ರಾಮ ಗಂವ್ಹಾರ ಗ್ರಾಮದಲ್ಲಿ ಗುರುವಾರ ಸಾಯಂಕಾಲ 5 ಗಂಟೆಗೆ ನೆರವೇರಿತು. ಅನೇಕ ರಾಜಕೀಯ ಮುಖಂಡರು ಸೇರಿದಂತೆ ಅವರ ಅಭಿಮಾನಿ ಬಳಗ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.