ಮುಂದಿನ ದಿನಗಳಲ್ಲಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಮುಂದಿನ ದಿನಗಳಲ್ಲಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಸಮೀಪದ ರಂಗೇನಹಳ್ಳಿ ಅಂಬಾಭವಾನಿ ಸಮುದಾಯ ಭವನದಲ್ಲಿ, ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ತರೀಕೆರೆ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಶಿವಮೊಗ್ಗ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು, ಚಿಕ್ಕಮಗಳೂರು ಜಿಲ್ಲಾ ಘಟಕ, ಸಂಜೀವಿನಿ ಹೆಲ್ತ್ ಕೇರ್ ತರೀಕೆರೆ ವತಿಯಿಂದ ಏರ್ಪಡಿಸಿದ್ದ ಉಚಿತ ಹೃದಯ ತಪಾಸಣೆ, ಮಧುಮೇಹ ತಪಾಸಣೆ ಮತ್ತು ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಈ ಎರಡು ವರ್ಷಗಳಲ್ಲಿ ಲಯನ್ ಕ್ಲಬ್ ತರೀಕೆರೆ ಇದರ ಕಾರ್ಯ ವೈಖರಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಬಹಳ ಉಪಯುಕ್ತವಾಗಿದೆ. ಎಲ್ಲದಕ್ಕೂ ವಿಶ್ರಾಂತಿ ಸಿಗುತ್ತದೆ ಆದರೆ ಹೃದಯ ಮಾತ್ರ ಸತತವಾಗಿ ಕೆಲಸ ಮಾಡುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತ ಎಂಬುದು ಸಾಮಾನ್ಯವಾಗಿ ಹರಡುತ್ತೀದ್ದು ಲಯನ್ ಸಂಸ್ಥೆಯವರು ಈ ದಿನ ನುರಿತ ಹೃದಯ ತಜ್ಞರನ್ನು ಕರೆಯಿಸಿ ಈ ಉಚಿತ ತಪಾಸಣೆ ನಡೆಯಿಸಿ ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ.ಹರೀಶ್ ಮಾತನಾಡಿ, ಈವರೆಗೂ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಏಲ್ಲಾ ಕಾರ್ಯಕ್ರಮವನ್ನು ನಡೆಸಲು ಸಂಸ್ಥೆಯ ನಿರ್ದೇಶಕರು ಕಾರಣ ಎಂದು ತಿಳಿಸಿದರು.

ಸುಮಾರು 125ಕ್ಕೂ ಹೆಚ್ಚಿನ ವರಿಗೆ ಈಸಿಜಿ, ಎಕೋ ಪರೀಕ್ಷೆಯನ್ನು 70ಕ್ಕೂ ಹೆಚ್ಚಿನವರಿಗೆ ನಡೆಸಲಾಗಿದೆ, ಮಧುಮೇಹ ತಪಾಸಣೆ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆದಿದ್ದು 25ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು.

ಹೃದಯ ತಜ್ಞ ಡಾ ಬಾಲಸುಬ್ರಮಣಿ ಆರ್., ಬೆಂಗಳೂರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಚಿಕ್ಕಮಗಳೂರು ಜಿಲ್ಲಾ ಘಟಕ ಅಧ್ಯಕ್ಷ, ನಿವೃತ್ತ ಸೈನಿಕ ಶ್ರೀನಿವಾಸ್, ಮುಡುಗುಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಬಿ.ಕೆ., ಮುಸ್ಲಿಂ ಮುಖಂಡ ಸಿರಾಜ್, ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಜಾಜ್ ಪಾಶ, ಖಚಾಂಚಿ ಟಿ.ಎಂ.ನವೀನ್, ಮಹಮದ್ ಬಿಲಾಲ್ ಖಾನ್, ಮಹಮದ್ ಯೂಸುಫ್ ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.