ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಠದ ಭಕ್ತರು ತೋರಿದ ಔದಾರ್ಯದಿಂದ ನಮ್ಮ ಮನಸ್ಸು ತುಂಬಿ ಬಂದಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲ ದಿನ ಆಶೀರ್ವಚನ ನೀಡಿದ ಶ್ರೀಗಳು, ಈ ಬಾರಿ ಹುಣ್ಣಿಮೆಯನ್ನು ಭರಮಸಾಗರದಲ್ಲಿ ಆಚರಿಸಬೇಕಾಗಿತ್ತು. ಮಳೆ, ಬೆಳೆ ಇಲ್ಲದೆ ಜನರು ಸಂಕಷ್ಟದಲ್ಲಿರುವ ಸಡಗರ ಬೇಡವೆಂದು ಸಿರಿಗೆರೆಯಲ್ಲಿ ಮೂರು ದಿನ ಆಚರಿಸಲು ನಿರ್ಧರಿಸಿದೆವು.
ಬರ ಆವರಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ಅವರೇ ಸಂಕಷ್ಟದಲ್ಲಿದ್ದರೂ ನಾವು ನೀಡಿದ ಕರೆಗೆ ಸ್ಪಂದನೆ ನೀಡಿ ತರಳಬಾಳು ಹುಣ್ಣಿಮೆ ಆಚರಣೆಗೆ ನಿರೀಕ್ಷೆಗೂ ಮೀರಿದ ಕಾಣಿಕೆಯನ್ನು ನೀಡಿದ್ದಾರೆ. ಇದು ನಮ್ಮ ಮಠದ ಭಕ್ತರ ಔದಾರ್ಯ ಎಂದು ಶ್ರೀಗಳು ತಿಳಿಸಿದರು.ಯುವಕರನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ. ಅವರಿಗೆ ಮಾರ್ಗದರ್ಶನ ಮಾಡುವಂತ ಮುಖಂಡತ್ವದ ಅಗತ್ಯ ಇದೆ. ಈಗೀಗ ಗ್ರಾಮೀಣ ಕ್ರೀಡೆಗಳು ಅಳಿವಿನ ಅಂಚಿನಲ್ಲಿವೆ. ಅಂತಹ ಕ್ರೀಡೆಗಳಲ್ಲಿ ಯುವಕರನ್ನು ತೊಡಗಿಸಿ ಅವರಲ್ಲಿ ಕ್ರಿಯಾತ್ಮಕತೆಯನ್ನು ಬೆಳೆಸಬೇಕು ಎಂದರು.
ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ಯುವಕರು ದೇಶದ ಸಂಪತ್ತು. ದೇಶವನ್ನು ಬೆಳಗುವಂತಹ ಶಕ್ತಿ ಇಂದಿನ ಯುವಕರಲ್ಲಿದೆ. ಅವರನ್ನು ನಿಸ್ವಾರ್ಥದಿಂದ ಜಾಗೃತಗೊಳಿಸಬೇಕು ಎಂದರು.ಯುವಕರು ಓದಿಗಿಂತ ಹೆಚ್ಚಾಗಿ ತಮ್ಮ ಸಮಯವನ್ನು ಮೊಬೈಲ್ ಫೋನ್‌ನಲ್ಲಿಯೇ ಕಳೆಯುತ್ತಿದ್ದಾರೆ. ಯುವಕರಲ್ಲಿ ಅಪಾರವಾದ ಶಕ್ತಿ ಇದೆ. ಅವರನ್ನು ಸರಿದಾರಿಯಲ್ಲಿ ನಡೆಸಿಕೊಂಡರೆ ದೇಶಕ್ಕೆ ದೊಡ್ಡ ಕೊಡುಗೆಯಾಗುತ್ತಾರೆ. ಅವರು ಮೊಬೈಲ್‌ನಿಂದ ಹೊರಬರಬೇಕಾಗಿದೆಯಷ್ಟೆ ಎಂದರು.
ತರಳಬಾಳು ಹುಣ್ಣಿಮೆಯಲ್ಲಿ ಇಂದುಮಧ್ಯಾಹ್ನ 3 ಗಂಟೆಯಿಂದ ತೆರೆದ ವಾಹನದಲ್ಲಿ ತರಳಬಾಳು ಶ್ರೀಗಳ ಗ್ರಾಮ ಸಂಚಾರ
ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮತರಳಬಾಳು ಶ್ರೀಗಳಿಂದ ಸದ್ಧರ್ಮ ಸಿಂಹಾಸನಾರೋಹಣ
ಮುಖ್ಯ ಅತಿಥಿಗಳು: ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ್, ಸಾಧುಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪಅತಿಥಿಗಳು: ಶಾಸಕ ಡಿ.ಬಿ.ಶಾಂತನಗೌಡ, ಹೊನ್ನಾಳಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಇಸ್ರೇಲ್‌ನ ಗಿಲ್ ಬೆನ್ ಹೆರುಟ್
ಉಪನ್ಯಾಸ: ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ, ಹಿರೇಮಗಳೂರಿನ ಹಿರೇಮಗಳೂರು ಕಣ್ಣನ್ಅಭಿನಂದನೆ: ಪದ್ಮಶ್ರೀ ಪುರಸ್ಕೃತ ಪಿಯರ್ ಸಿಲ್ವನ್ ಫಿಲಿಯೋಜಾ ಮತ್ತು ವಸುಂಧರಾ ಫಿಲಿಯೋಜಾ, ಪ್ಯಾರಿಸ್, ವೀರ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಪೋಷಕರಾದ ಕೆ.ಪಿ.ಅನುರಾಧ ಮತ್ತು ಎಂ.ವೆಂಕಟೇಶ್.
ಹುತಾತ್ಮ ಯೋಧರ ಕುಟುಂಬಗಳಿಗೆ ತರಳಬಾಳು ಶ್ರೀಗಳ ಆರ್ಥಿಕೆ ನೆರವು ಮತ್ತು ಅಭಿನಂದನೆ.