ಅಂಬಾರಿ ಆನೆ ಅರ್ಜುನನಿಗೆ ಭಾವಪೂರ್ಣ ಶ್ರದ್ಧಾಂಜಲಿ

| Published : Dec 05 2024, 12:33 AM IST

ಸಾರಾಂಶ

ವಿಶ್ವ ವಿಖ್ಯಾತ ಮೈಸೂರು ದಸರಾ ನೇತೃತ್ವವನ್ನು ಕ್ಯಾಪ್ಟನ್ ಅರ್ಜುನ 20 ವರ್ಷಗಳ ಕಾಲ ದಸರಾದಲ್ಲಿ ಪಾಲ್ಗೊಂಡು, ಒಂಬತ್ತು ವರ್ಷಗಳ ಕಾಲ ಅಂಬಾರಿ ಹೊತ್ತಿದ್ದು, ಯಶಸ್ವಿಯಾಗಿ ನಿಭಾಯಿಸಿದಂತ ಕ್ಯಾಪ್ಟನ್ ಅರ್ಜುನನ್ನು ಆಗಲಿ ಒಂದು ವರ್ಷವಾಯಿತು,

ಮೈಸೂರು: ವಿಶ್ವವಿಖ್ಯಾತ ದಸರೆಯಲ್ಲಿ ಅಂಬಾರಿ ಆನೆಯಾಗಿದ್ದ ''''''''''''''''ಅರ್ಜುನ''''''''''''''''ನಿಗೆ ನಗರದ ಅಗ್ರಹಾರದ ವೃತದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾ ನೇತೃತ್ವವನ್ನು ಕ್ಯಾಪ್ಟನ್ ಅರ್ಜುನ 20 ವರ್ಷಗಳ ಕಾಲ ದಸರಾದಲ್ಲಿ ಪಾಲ್ಗೊಂಡು, ಒಂಬತ್ತು ವರ್ಷಗಳ ಕಾಲ ಅಂಬಾರಿ ಹೊತ್ತಿದ್ದು, ಯಶಸ್ವಿಯಾಗಿ ನಿಭಾಯಿಸಿದಂತ ಕ್ಯಾಪ್ಟನ್ ಅರ್ಜುನನ್ನು ಆಗಲಿ ಒಂದು ವರ್ಷವಾಯಿತು, ವಿಪರ್ಯಾಸವೆಂದರೆ ಅರ್ಜುನನ ಸಾವಿನ ಬಗ್ಗೆ ತನಿಖೆ ಮಾಡಿದ್ದೇವೆ ಎಂದು ಸರ್ಕಾರ ಕೊಟ್ಟ ಭರವಸೆ ಹುಸಿಯಾಗಿದೆ, ಸರ್ಕಾರವೇ ಇನ್ನಾದರೂ ಎಚ್ಚೆತ್ತು ಅರಣ್ಯ ಇಲಾಖೆ ಸೂಕ್ತ ತನಿಖೆ ಮಾಡಿ ಮುಂದೆ ಇಂತಹ ಅವಘಡ ವಾಗದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು. ನಾಲ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಮಾದಪ್ಪ, ನಿವೃತ್ತ ಶಿಕ್ಷಕ ಮನೋಹರ್, ಭವಾನಿ, ಸಿದ್ದಪ್ಪ ಎಲ್.ಐಸಿ, ಗೋವಿಂದ್ ರಾಜ್, ಸ್ವಾಮಿ, ಹರೀಶ್, ರಮೇಶ್ ಇದ್ದರು.ೇೇ