ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : Feb 27 2025, 12:36 AM IST

ಸಾರಾಂಶ

ಬೇಬಿಬೆಟ್ಟದ ಜಾತ್ರೆ ಪಾರಂಪಾರಿಕವಾಗಿ ವೈಭವದಿಂದ ನಡೆದುಕೊಂಡು ಬಂದಿದೆ. ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿವೆ. ಇದನ್ನು ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ಗಳ ಹಾವಳಿ ಆಡಂಬರಿಂದ ತಮ್ಮ ಜೀವನವನ್ನು ಆಳುಮಾಡುಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿಬೆಟ್ಟದ ಅಮೃತ ಮಹಲ್ ಕಾವಲು ಪ್ರದೇಶದಲ್ಲಿ ಶಿವರಾತ್ರಿ ಹಬ್ಬದಿಂದ ಆರಂಭಗೊಂಡ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ಬುಧವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಿದರು.

ಬೇಬಿಬೆಟ್ಟದ ಆವರಣದಲ್ಲಿ ಶ್ರೀಮಹದೇಶ್ವರಸ್ವಾಮಿ ಪೂಜೆ ಸಲ್ಲಿಸಿ ಬಳಿಕ ಜಾತ್ರಾ ಆವರಣದಲ್ಲಿ ವಿವಿಧ ಇಲಾಖೆಗಳಿಂದ ಹಾಕಲಾಗಿರುವ ವಸ್ತು ಪ್ರದರ್ಶನದ ಮಳಿಗೆಗಳಿಗೆ ಚಾಲನೆ ನೀಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಆರೋಗ್ಯ, ಸೆಸ್ಕ್, ಮಹಿಳಾ ಮತ್ತು ಮಕ್ಕಳ‌ಕಲ್ಯಾಣ ಅಭಿವೃದ್ದಿ, ಮೀನುಗಾರಿಕೆ, ಶಿಕ್ಷಣ ಇಲಾಖೆಗಳು ತಮ್ಮ‌ಇಲಾಖೆಯಲ್ಲಿ ದೊರೆಯುವ ಸವಲತ್ತುಗಳನ್ನು ಬಗ್ಗೆ ಪ್ರದರ್ಶಿಸಲಾಯಿತು. ಜಾತ್ರೆಗೆ ಆಗಮಿಸಿದ ರೈತರು ಆಗಮಿಸಿ ಮಾಹಿತಿ ಪಡೆದುಕೊಂಡರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಜಾತ್ರಾ ಮಹೋತ್ಸವಗಳಿ ಜಾತಿ-ಮತ,ಪಂಥವನ್ನು ಬಿಟ್ಟು ಎಲ್ಲರು ಒಟ್ಟಾಗಿ ಸೇರಿ ಆಚರಣೆ ಮಾಡುವ ಮೂಲಕ ನಾವೆಲ್ಲರು ಸಮಾನರು ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿದೆ ಎಂದರು.

ಬೇಬಿಬೆಟ್ಟದ ಜಾತ್ರೆ ಪಾರಂಪಾರಿಕವಾಗಿ ವೈಭವದಿಂದ ನಡೆದುಕೊಂಡು ಬಂದಿದೆ. ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿವೆ. ಇದನ್ನು ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ಗಳ ಹಾವಳಿ ಆಡಂಬರಿಂದ ತಮ್ಮ ಜೀವನವನ್ನು ಆಳುಮಾಡುಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಸಹ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳುವ ಮೂಲಕ‌ ಮಕ್ಕಳು ಮಾನಸಿಕ, ಧಾರ್ಮಿಕವಾಗಿ ಸದೃಢರಾಗಲಿದ್ದಾರೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೇಬಿಬೆಟ್ಟದ ಜಾತ್ರೆ ನಡೆಸಲು ಹಲವು ಮಂದಿ ಶ್ರಮಿಸಿದ್ದಾರೆ‌. ರಾಜ್ಯದ ಮೂಲೆ ಮೂಲೆಗಳಿಂದ ರಾಸುಗಳು ಆಗಮಿಸಿ ದ್ದು, ರಾಸುಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಠದ ವತಿಯಿಂದ ನಿತ್ಯದಾಸೋಹ ನಡೆಸಲಿದ್ದಾರೆ. ಜಾತ್ರೆಗೆ ಬರುವ ರೈತರು ವಸ್ತು ಪ್ರದರ್ಶನದ ಬಳಿ ತೆರಳಿ ಅಲ್ಲಿ ಅಧಿಕಾರಿಗಳು ನೀಡುವ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಕೃಷಿಯಲ್ಲಿ ಪ್ರಮುಖವಾಗಿ ಬೆಳೆ ಪದ್ಧತಿ, ನೀರು ಬಳಿಕೆ ಪದ್ಧತಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇನ್ನೂ ಮಾ.2 ರಂದು ನಡೆಯುವ ಸರಳ ಸಾಮೂಹಿಕ ವಿವಾಹಕ್ಕೆ 22 ಮಂದಿ ಜೋಡಿಗಳು ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು‌.

ಜಾತ್ರೆಯ ಮೊದಲ ದಿನವಾದ ಬುಧವಾರ ವಿವಿಧ ಜಿಲ್ಲೆಗಳಿಂದ ಬರುವ ರಾಸುಗಳ ಸಂಖ್ಯೆ ಕಡಿಮೆ ಇತ್ತು. ಗುರುವಾರ, ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಆಗಮಿಸಲಿವೆ.

ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವಸ್ವಾಮೀಜಿ ಮಾತನಾಡಿ, ಮೇಲುಕೋಟೆ ಮತ್ತು ಬೇಬಿಬೆಟ್ಟ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಮೇಲುಕೋಟೆಯನ್ನು ಯದುಗಿರಿ ಎಂಬುದಾಗಿ ಕರೆದರೆ ಬೇಬಿಬೆಟ್ಟವನ್ನು ಸಿದ್ದಗಿರಿ ಎಂಬುದಾಗಿ ಉಲ್ಲೇಖಿಸುತ್ತಾರೆ ಎಂದರು.

ಬೇಬಿಬೆಟ್ಟದಲ್ಲಿ ಅನೇಕ ಸಿದ್ದಿಪುರುಷ ತಪ್ಪಸ್ಸು ಮಾಡಿದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರ ದನಗಳ ಜಾತ್ರೆ ಹೆಸರುವಾಸಿಯಾಗಿದೆ. ರಾಜ್ಯದ ನಾನಾ ಭಾಗದಿಂದ ಹಳ್ಳಿಕಾರ್ ತಳಿಯ ರಾಸುಗಳು ಭಾಗವಹಿಸಿ ಜಾತ್ರೆಗೆ ಮೆರಗು ನೀಡುತ್ತವೆ. ಈ ಬಾರಿ ವಿಶೇಷವಾಗಿ ಹತ್ತು ಬಹುಮಾನಗಳನ್ನು ಆಯ್ದ ರಾಸುಗಳಿಗೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ತಾಪಂ ಇಒ ಲೋಕೇಶ್ ಮೂರ್ತಿ, ಸುನೀತ ಪುಟ್ಟಣ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್, ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಸ್.ದಯಾನಂದ, ಬಿಇಓ ರವಿಕುಮಾರ್, ಪಿ.ನಾಗರಾಜು, ರಾಘವ, ಅಂಕಯ್ಯ, ಗ್ರಾಪಂ ಅಧ್ಯಕ್ಷರಾದ ಪುಟ್ಟನಿಂಗಮ್ಮ, ಕೆ.ಕೆ.ಪ್ರಕಾಶ್, ನಂಜೇಗೌಡ, ಬಲರಾಮಶೆಟ್ಟಿ, ರಮೇಶ್, ಆರ್.ನಿರ್ಮಲ, ಮುಖಂಡರಾದ ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಬಿ.ಜೆ.ಸ್ವಾಮಿ, ಬಿ.ಕೆ.ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.