ಕಟ್ಟಡ ನಿರ್ಮಾಣಕ್ಕೆ ಕಳಪೆ ಎಂಸ್ಯಾಂಡ್, ಮತ್ತು ತುಕ್ಕು ಹಿಡಿದ ಕಬ್ಬಿಣ, ಕಳಪೆ ಸಾಮಗ್ರಿಗಳ ಬಳಕೆಗೆ ತೀವ್ರ ವಿರೋಧ
ಕನ್ನಡಪ್ರಭ ವಾರ್ತೆ ತರೀಕೆರೆಪಟ್ಟಣದ ನಾಗಪ್ಪ ಕಾಲೋನಿ ಪಕ್ಕದ ಸೋಮೇಶ್ವರ ಬಡಾವಣೆಯಲ್ಲಿ ಪುರಸಭೆಯಿಂದ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನದಲ್ಲಿ ನಿರ್ಮಾಣವಾಗುತ್ತಿರುವ ಮೌಲಾನ ಆಜಾದ್ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿಯ ಕಳಪೆ ಗುಣಮಟ್ಟ ವಿರೋಧಿಸಿ ಶನಿವಾರ ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಅಂದಾಜು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಮೌಲಾನ ಆಜಾದ್ ಸರ್ಕಾರಿ ಶಾಲೆ ಕಟ್ಟಡದ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ನಿರ್ಮಾಣಕ್ಕೆ ಬಳಸುತ್ತಿರುವ ಎಂಸ್ಯಾಂಡ್ ತೀರ ಕಳಪೆ. ಗೋಡೆಗಳ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಎಲ್ಲ ಕಬ್ಬಿಣಗಳ ಅಳತೆ ಹಾಗೂ ಗಾತ್ರ ವ್ಯತ್ಯಾಸದಿಂದ ಕೂಡಿದೆ. ಮೌಲಾನಾ ಆಜಾದ್ ಸರ್ಕಾರಿ ಶಾಲೆಗೆ ಈ ಭಾಗದ ಸುತ್ತಮುತ್ತಲಿನ ಬಡವರ ಮಕ್ಕಳಿಗೆ ಶಿಕ್ಷಣ ನೀಡಿ ಸುಂದರ ಭವಿಷ್ಯ ರೂಪಿಸಬೇಕಾದ ಈ ಶಾಲೆ ನಿರ್ಮಾಣ ಕಾರ್ಯ ಸರಿಯಿಲ್ಲ ಎಂದು ಹೇಳಿದರು.ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅಧಿಕಾರಿ, ಗುತ್ತಿಗೆದಾರರು ಇಲ್ಲ, ನಿರ್ಮಾಣಕ್ಕೆ ಬಳಸುತ್ತಿರುವ ಸಾಮಗ್ರಿಗಳ ಕುರಿತು ಮಾಹಿತಿ ಕೊಡುವವರು ಯಾರೂ ಇಲ್ಲ, ಈ ಕಾಮಗಾರಿ ಯಾರಿಗೂ ತೃಪ್ತಿ ಕೊಡುತ್ತಿಲ್ಲ. ಈ ಕಟ್ಟಡದ ಗುಣಮಟ್ಟ ನೋಡುವುದು ಪ್ರತಿಯೊಬ್ಬರ ಕರ್ತವ್ಯ. ಶಾಲೆಗೆ ಅಗತ್ಯವಿರುವ ಮೂಲಬೂತ ಸೌಲಭ್ಯಗಳೆ ಇಲ್ಲ. ಒಬ್ಬ ಚುನಾಯಿತ ಪ್ರತಿನಿಧಿಯಾಗಿ ನಾಗರೀಕರ ಸಹಕಾರದಿಂದ ನಾನು ಈ ಕಳಪೆ ಕಾಮಗಾರಿಯನ್ನು ವಿರೋದಿಸುತ್ತಿದ್ದೇನೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಶಾಲಾ ಕಟ್ಟಡ ಕಾಮಗಾರಿ ಕಳಪೆ ಗುಣಮಟ್ದದ ಬಗ್ಗೆ ನಾನು ಪ್ರಶ್ನಿಸಿದ್ದಕ್ಕೆ ಸಾರ್ವಜನಿಕರೆದುರು ಪೋಲೀಸ್ ಅಧಿಕಾರಿಯೊಬ್ಬರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಖಂಡನೀಯ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.ಕಳಪೆ ಕಾಮಗಾರಿ ಮತ್ತು ಅವಹೇಳನಕಾರಿ ಹೇಳಿಕೆ ಖಂಡಿಸಿ ಮೇ.4 ಸೋಮವಾರದಂದು ನಾಗರಿಕ ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಚಟನೆ ಹಮ್ಮಿಕೊಳ್ಳಾಲಾಗುವುದು ಎಂದು ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್ ತಿಳಿಸಿದ್ದಾರೆ. ಪುರಸಭೆ ಮಾಜಿ ನಾಮಿನಿ ಸದಸ್ಯೆ ಅರುಂಧತಿ ಹೆಗಡೆ ಮಾತನಾಡಿ ಸಂವಿಧಾನ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕು ನೀಡಿದೆ. ಅನ್ಯಾಯ ಖಂಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಅನ್ಯಾಯ ಖಂಡಿಸುವ ವಿಚಾರದಲ್ಲಿ ಬೆಂಬಲ ನೀಡಬೇಕು ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜ್, ಮಾಮ್ ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ದಲಿತ ಮುಖಂಡರಾದ ಸುನೀಲ್, ರಘು, ಹನುಮಂತು, ಮಂಜು, ಜಯಕುಮಾರ್, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಆನಂದ್, ಸುರೇಶ್, ದಿನೇಶ್, ಮತ್ತಿತರರು ಭಾಗವಹಿಸಿದ್ದರು.-
2ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೌಲಾನ ಆಜಾದ್ ಸರ್ಕಾರಿ ಶಾಲಾ ಕಟ್ಟಡ ಕಳಪೆ ಕಾಮಗಾರಿ ವಿರೋಧಿಸಿ ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜ್, ಮಾಮ್ ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ದಲಿತ ಮುಖಂಡರಾದ ಸುನೀಲ್, ವಿಎಚ್‌ಪಿ ತಾಲೂಕು ಅಧ್ಯಕ್ಷ ಆನಂದ್ ಭಾಗವಹಿಸಿದ್ದರು.