ಇಲ್ಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ನಾಪೋಕ್ಲು : ಇಲ್ಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.ಪಟ್ಟಣ ಸೇರಿದಂತೆ ಬೇತು, ನೆಲಜಿ, ಕಕ್ಕಬೆ, ಎಮ್ಮೆಮಾಡು, ಹೊದ್ದೂರು, ಕೊಟ್ಟಮುಡಿ, ಪಾಲೂರು ಹಾಗೂ ಬೆಟ್ಟಗೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿತು.
ನಾಪೋಕ್ಲು - ಹಳೆ ತಾಲೂಕು ಮುಖ್ಯ ರಸ್ತೆಯ ಕೆಪಿಎಸ್ ಶಾಲೆ ಸಮೀಪ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಇಡೀ ರಸ್ತೆ ಕೆರೆಯಂತಾಗಿತ್ತು. ಇದರಿಂದಾಗಿ ಈ ಮರದಲ್ಲಿ ಸಂಚರಿಸುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸವಾರರು ಸಾಗಲು ಹರಸಾಹಸ ಪಡುವಂತಾಯಿತು.ಈಗ ಸುರಿದಿರುವುದರಿಂದ ಈ ಭಾಗದ ಕೃಷಿಕರು ಹಾಗೂ ಕಾಫಿ-ಪೆಪ್ಪರ್ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.