ಸಾರಾಂಶ
ಚಳ್ಳಕೆರೆ : ತಾಲೂಕಿನಲ್ಲಿ ಚಿತ್ತ ಮಳೆ ಅಬ್ಬರ ನಿರೀಕ್ಷೆಗೂ ಮೀರಿ ಮುಂದುವರಿದಿದ್ದು, ತಾಲೂಕಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಿದೆ. ಕಳೆದ ೩೦-೪೦ ವರ್ಷಗಳಿಂದ ಖಾಲಿ ಬಿದಿದ್ದ ಅನೇಕ ಕೆರೆಗಳು ತುಂಬಿ ಕೋಡಿಬಿದ್ದಿವೆ. ಕಳೆದ ೧೪ ದಿನಗಳಲ್ಲಿ ತಾಲೂಕಿನಲ್ಲಿ ಸುಮಾರು ೮೦೦ ಮಿಮೀ ಮಳೆ ಬಿದ್ದಿದ್ದು ಬಯಲು ಸೀಮೆಯ ಜನರಿಗೆ ಮಲೆ ನಾಡಿನ ಅನುಭವ ನೀಡಿದೆ.
ಚಳ್ಳಕೆರೆ : ತಾಲೂಕಿನಲ್ಲಿ ಚಿತ್ತ ಮಳೆ ಅಬ್ಬರ ನಿರೀಕ್ಷೆಗೂ ಮೀರಿ ಮುಂದುವರಿದಿದ್ದು, ತಾಲೂಕಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಿದೆ. ಕಳೆದ ೩೦-೪೦ ವರ್ಷಗಳಿಂದ ಖಾಲಿ ಬಿದಿದ್ದ ಅನೇಕ ಕೆರೆಗಳು ತುಂಬಿ ಕೋಡಿಬಿದ್ದಿವೆ. ಕಳೆದ ೧೪ ದಿನಗಳಲ್ಲಿ ತಾಲೂಕಿನಲ್ಲಿ ಸುಮಾರು ೮೦೦ ಮಿಮೀ ಮಳೆ ಬಿದ್ದಿದ್ದು ಬಯಲು ಸೀಮೆಯ ಜನರಿಗೆ ಮಲೆ ನಾಡಿನ ಅನುಭವ ನೀಡಿದೆ.
ತಳಕು ಹೋಬಳಿ ಗಜ್ಜಾಗಾನಹಳ್ಳಿಯಲ್ಲಿ ಕುರಿಮೇಯಿಸಲು ಹೋದ ಮಂಜುನಾಥ (೨೫), ನರ್ತನ ಕುಮಾರ್ (೧೮), ಮಾರಣ್ಣ(೨೦) ಮತ್ತು ಕುರಿಗಳು ದಿಢೀರ್ ಮಳೆ ಹಾಗೂ ರಭಸವಾಗಿ ಹರಿದ ಹಳ್ಳದ ನೀರಿನಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾರೆ. ಮೂರು ಕುರಿಗಳು ಹಾಗೂ ಮೂವರು ವ್ಯಕ್ತಿಗಳು ಹಳ್ಳದ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ದೂರದಿಂದ ಇವರನ್ನು ಕಂಡ ಜನರು ಪೊಲೀಸ್, ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಅಧಿಕಾರಿಗಳು ಅಗ್ನಿಶಾಮಕ ಪಡೆ ಸಹಾಯದಿಂದ ಮೂವರನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಇವರೊಂದಿಗೆ ಕುರಿಗಳು ಸಹ ದಡ ಸೇರಿವೆ. ಇದೇ ಗ್ರಾಮದ ಟ್ರ್ಯಾಕ್ಟರ್ ಸೈಜುಗಲ್ಲುಗಳನ್ನು ತುಂಬಿಕೊಂಡು ತಳಕು ಮೂಲಕ ಚಳ್ಳಕೆರೆ ಕಡೆ ಬರುವ ಸಂದರ್ಭದಲ್ಲಿ ಗಜ್ಜಾಗಾನಹಳ್ಳಿಯ ಹಳ್ಳ ಇಳಿಸಿದ್ದಾರೆ. ಕೆಲವೇ ನಿಮಿಷದಲ್ಲಿ ಟ್ರ್ಯಾಕ್ಟರ್ ಮತ್ತು ಟ್ರಾಲಿ ಪಲ್ಟಿಯಾಗಿ ನೀರಿನ ರಂಭಸಕ್ಕೆ ಸ್ವಲ್ಪದೂರ ಮುಂದಕ್ಕೆ ತೇಲಿ ಹೋಗಿ ನಂತರ ಕಲ್ಲಿನ ಆಸರೆಯಿಂದ ಹಾಗೇ ನಿಂತಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಸಾರ್ವಜನಿಕರು ಅವರನ್ನು ರಕ್ಷಣೆ ಮಾಡಿದ್ದಾರೆ. ಎನ್.ಮಹದೇವಪುರ ಗ್ರಾಮದಲ್ಲಿ ಮಳೆ ನೀರು ಗ್ರಾಮದ ಚಂದ್ರಣ್ಣ ಎಂಬುವವರ ಕೋಳಿ ಫಾರಂಗೆ ನುಗ್ಗಿದ ಪರಿಣಾಮ ೨೫ ಸಾವಿರ ಕೋಳಿಗಳು ಸಾವನ್ನಪ್ಪಿವೆ. ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ತಳಕು ಗ್ರಾಮದ ಜಯಬಾಯಿ ಎಂಬುವವರ ಅಡಿಕೆ ತೋಟ, ರವಿಕುಮಾರ್ ಎಂಬುವವರ ಎರಡು ಎಕರೆ ಅಡಿಕೆ, ಎರಡು ಎಕರೆ ಮೆಕ್ಕೆಜೋಳ, ಶಿವಕುಮಾರ್‌ರವರ ೨ ಎಕರೆ ಅಡಿಕೆ ತೋಟ ನೀರಿನಲ್ಲಿ ಮುಳುಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ರೇಖಲಗೆರೆಯ ನಂಕಿಬಾಯಿ ಎಂಬುವವರ ಸುಮಾರು ಎರಡು ಎಕರೆ ಟೊಮೆಟೊ ಬೆಳೆ ನೀರಿನಿಂದ ಆವೃತವಾಗಿ ಲಕ್ಷಾಂತರ ನಷ್ಟ ಸಂಭವಿಸಿದೆ.ರೆಡ್ಡಿಹಳ್ಳಿ ಗ್ರಾಮದ ಬೋರಯ್ಯ ಎಂಬುವವರ ತೊಗರಿಬೆಳೆ ನೀರಿನಲ್ಲಿ ಮುಳುಗಿದೆ, ಎನ್.ಗೌರಿಪುರದ ಚಂದ್ರಣ್ಣ ಎಂಬುವವರ ಶೇಂಗಾ, ತೊಗರಿ ಬೆಳೆ ನೀರಿನಲ್ಲಿ ಮುಳುಗಿವೆ. ತಾಲೂಕಿನ ಘಟಪರ್ತಿ ಗ್ರಾಮದ ಕೆರೆ ತುಂಬಿ ಕೋಡಿಹರಿದಿದ್ದು, ನೂರಾರು ಜನರು ವೀಕ್ಷಣೆ ಮಾಡಿದರು.