ಸಾರಾಂಶ
ಕನಕಪುರ: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿಮಳೆಗೆ ಕುಸಿದು ಬಿದ್ದ ಮನೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನಕಪುರ: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿಮಳೆಗೆ ಕುಸಿದು ಬಿದ್ದ ಮನೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಮೇಗಳಬೀದಿಯ ನೀಲಶೆಟ್ಟರ ಬೀದಿಯಲ್ಲಿ ತಾಯಿ, ಮಗಳು ವಾಸವಿದ್ದ ಮನೆ ಕುಸಿದು ಬಿದ್ದಿದೆ. ವೃದ್ಧೆ ಪಾರ್ವತಮ್ಮ (60) ಹಾಗೂ ಖಾಸಗಿ ಬ್ಯಾಂಕ್‌ನಲ್ಲಿ ದಿನಗೂಲಿ ನೌಕರಿ ಮಾಡುತ್ತಿರುವ ಮಗಳು ಮಂಜುಳಾ ಹೆಂಚಿನ ಮನೆ ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯ ಮುಂಭಾಗದ ಗೋಡೆ ಕುಸಿದು ಬಿದ್ದಿದೆ.ಸುದ್ದಿ ತಿಳಿದ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ತಾಯಿ, ಮಗಳಿಗೆ ಸಾಂತ್ವನ ಹೇಳಿ, ತಹಸೀಲ್ದಾರ್ ಮಂಜುನಾಥ್ ಹಾಗೂ ನಗರಸಭೆ ಆಯುಕ್ತ ಮಹದೇವ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರದ ಜೊತೆಗೆ ವಸತಿ ಯೋಜನೆ ಅಡಿ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದರು. ಈ ವೇಳೆ ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧು, ಕಸಬಾ ಅಧ್ಯಕ್ಷ ಮುತ್ತುರಾಜ್, ನಗರಸಭೆ ಮಾಜಿ ಅಧ್ಯಕ್ಷ ಮಲ್ಲೇಶ್, ಮುಖಂಡರಾದ ಬಂಡಿ ನಾಗರಾಜು, ಏಳಗಳ್ಳಿ ರವಿ ಮತ್ತಿತರರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01 :ಕನಕಪುರದಲ್ಲಿ ಭಾನುವಾರ ರಾತ್ರಿ ಸುದ್ದಿದ ಮಳೆಗೆ ನೀಲಶೆಟ್ಟರ ಬೀದಿಯಲ್ಲಿ ಕುಸಿತಗೊಂಡ ಮನೆಯನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು.