ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆ ಶನಿವಾರ ಸಂಜೆ ಜೋರು ಮಳೆ ಸುರಿದಿದೆ. ಇದರಿಂದ ಜಿಲ್ಲೆಯ ವಾತಾವರಣ ತುಸು ತಂಪಾಗಿದೆ.
ಶಿವಮೊಗ್ಗ: ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆ ಶನಿವಾರ ಸಂಜೆ ಜೋರು ಮಳೆ ಸುರಿದಿದೆ. ಇದರಿಂದ ಜಿಲ್ಲೆಯ ವಾತಾವರಣ ತುಸು ತಂಪಾಗಿದೆ.
ಶಿವಮೊಗ್ಗ ತಾಲೂಕಿನಲ್ಲಿ ದಟ್ಟ ಮೋಡ ಆವರಿಸಿದ್ದು, ವಿವಿಧ ಬಡಾವಣೆಯಲ್ಲಿ ಜೋರು ಮಳೆಯಾಗಿದೆ. ಕಳೆದ ಕೆಲವು ದಿನದಿಂದ ಶಿವಮೊಗ್ಗದಲ್ಲಿ ಮೋಡ ಆವರಿಸಿದ್ದರು ಮಳೆಯಾಗಿರಲಿಲ್ಲ. ಮೂರು ದಿನದ ಹಿಂದೆರಾತ್ರಿ ವೇಳೆ ಹಲವು ಕಡೆ ಮಳೆಯಾಗಿತ್ತು.ಇನ್ನು, ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಮಳೆಯಾಗುತ್ತಿದೆ. ಭಾಂಡ್ಯ ಕುಕ್ಕೆ, ತೀರ್ಥಹಳ್ಳಿ, ಬೆಜ್ಜವಳ್ಳಿ, ಸಾಲ್ಗಡಿ, ತೀರ್ಥಮತ್ತೂರು, ಹೊನ್ನೇತಾಳು, ಮೇಗರವಳ್ಳಿ, ಹೊಸಹಳ್ಳಿ, ಮುಳುಬಾಗಿಲು ಸುತ್ತಮುತ್ತ ಮಳೆಯಾಗುತ್ತಿದೆ. ಹೊಸನಗರದ ಸೋನಲೆ, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಸುತ್ತಮುತ್ತ, ಸೊರಬ, ಸಾಗರ, ಶಿಕಾರಿಪುರ ತಾಲೂಕಿನ ವಿವಿಧೆಡೆಯು ಮಳೆಯಾಗುತ್ತಿದೆ.ಮನೆಗಳ ಮೇಲೆ ಮರ ಬಿದ್ದು ಹಾನಿ:ಆನಂದಪುರ ಸಮೀಪದ ಆಚಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ.
ಅಕಾಲಿಕ ಮಳೆಗಾಳಿಯಿಂದ ಆಚಾಪುರ ಗ್ರಾಪಂ ವ್ಯಾಪ್ತಿಯ ಕೈರಾ ಗ್ರಾಮದ ರಮೇಶ್ ಎಂಬುವರ ವಾಸದ ಮನೆಯ ಮೇಲೆ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಇಸ್ಲಾಂಪುರ ಗ್ರಾಮದ ಮಂಜುನಾಥ್ ಎಂಬುವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿಹೋಗಿದ್ದ ಮನೆಯಲ್ಲಿ ಇದ್ದ ಭತ್ತ, ಅಕ್ಕಿ ಸೇರಿದಂತೆ ಅನೇಕ ವಸ್ತುಗಳಿಗೆ ಹಾನಿ ಸಂಭವಿಸಿದೆ.ಅಂದಾಸುರ ಗ್ರಾಮದ ರತ್ನಮ್ಮ ಅವರ ಮನೆಗೆ ಹಾನಿಯಾಗಿದ್ದು, ಸರ್ಕಾರಿ ಶಾಲೆಯ ಅಡಿಗೆ ಮನೆಯ ಆರ್‌ಸಿಸಿ ಸ್ಲಾಬ್ ಮೇಲೆ ಅಳವಡಿಸಲಾಗಿದ್ದ ಮೇಲ್ಛಾವಣಿ, ಶಾಲಾ ಕೊಠಡಿಯ ಮೇಲ್ಛಾವಣಿಯ ಹಂಚುಗಳು ಹಾರಿ ಹೋಗಿವೆ.