ಸಾರಾಂಶ
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಸುರಿದ ಮಳೆಯಿಂದ ಈ ಸಮಸ್ಯೆ ಉಂಟಾಗಿದೆ. ಪರಿಸರದ ಗ್ರಾಮೀಣ ಭಾಗದಲ್ಲೂ ಅಲ್ಲಲ್ಲಿ ಕೃಷಿ ತೋಟದ ಪಕ್ಕದ ತೋಡುಗಳು ಉಕ್ಕಿ ಹರಿದು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಉಪ್ಪಿನಂಗಡಿ; ಕಡಬ ತಾಲೂಕಿನಾದ್ಯಂತ ಬುಧವಾರ ಸಾಯಂಕಾಲ ಗುಡುಗು ಸಹಿತ ಧಾರಕಾರ ಮಳೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ರಸ್ತೆ ತುಂಬಾ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿತು.
ಉಪ್ಪಿನಂಗಡಿ - ಕಡಬ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಪೇಟೆಯಲ್ಲಿ ಹೆದ್ದಾರಿ ಪಕ್ಕದ ಚರಂಡಿ ಬ್ಲಾಕ್ ಆಗಿ ಮಳೆ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ವಾಹನ ಸಂಚಾರಕ್ಕೆ ತೊಡಕಾಯಿತು. ಕಡಬ ಸಮೂದಾಯ ಆಸ್ಪತ್ರೆ ಸಿಬ್ಬಂದಿಯ ಕ್ವಾಟ್ರಸ್ ಬಳಿಯ ಚರಂಡಿ ಉಕ್ಕಿ ಹರಿದು ಕೆಲವು ಕ್ವಾಟ್ರಸ್ ಒಳಗಡೆ ನೀರು ನುಗ್ಗಿದರೆ, ಕಡಬ ಕಾಲೇಜು ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಕೆಲಕಾಲ ಸಂಚಾರ ತಡೆ ಹಿಡಿಯಲ್ಪಟ್ಟಿತು.ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಸುರಿದ ಮಳೆಯಿಂದ ಈ ಸಮಸ್ಯೆ ಉಂಟಾಗಿದೆ. ಪರಿಸರದ ಗ್ರಾಮೀಣ ಭಾಗದಲ್ಲೂ ಅಲ್ಲಲ್ಲಿ ಕೃಷಿ ತೋಟದ ಪಕ್ಕದ ತೋಡುಗಳು ಉಕ್ಕಿ ಹರಿದು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.