ಕನ್ನಡಪ್ರಭ ವಾರ್ತೆ ಕೆಜಿಎಫ್ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಚಂರಡಿಗಳ ನೀರು ನುಗ್ಗಿದ ಹಿನ್ನಲೆಯಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ.ಭಾನುವಾರ ಸಂಜೆ ೫.೩೦ ಕ್ಕೆ ಪ್ರಾರಂಭವಾದ ಗುಡುಗು ಸಹಿತ ಮಳೆ ಮನೆ, ಮಳಿಗೆಗಳಿಗೆ ನುಗ್ಗಿತು. ರಾತ್ರಿ ೧೧ ಗಂಟೆಯವರೆಗೂ ಮಳೆ ಸುರಿದ ಪರಿಣಾಮ ರಸ್ತೆಗಳು ನದಿಯಂತಾಗಿ ವಾಹನ ಸವಾರರು, ಸಾರ್ವಜನಿಕರು ಪಾರಡುವಂತಾಯಿತು.ಭಾನುವಾರ ಗುಡುಗು ಗಾಳಿ ಸಹಿತ ಮಳೆ ಅಬ್ಬರಿಸಿದ್ದು, ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಒಂದೂವರೆ ಗಂಟೆ ಕಾಲ ಸುರಿದ ಭಾರಿ ಮಳೆಯಿಂದ ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದು, ಹಲವು ಬಡಾವಣೆಗಳಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಎಂ.ಜಿ.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಗಳು ಮಳೆಯಿಂದ ಹೈರಾಣವಾಗಿದ್ದಾರೆ.ವರ್ಷದ ಭರ್ಜರಿ ಮೊದಲ ಮಳೆ:ಅಂದಾಜು ೨೦ ರಿಂದ ೩೦ ಮೀ. ಮಳೆ ಸುರಿದ್ದು, ನಗರದಲ್ಲಿ ಉತ್ತಮವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಗಳಲ್ಲಿ ಹರಿದ ಪರಿಣಾಮ ಜನರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದರು. ಹಲವಡೆ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ, ಇನ್ನೂ ಪ್ರಮುಖ ರಸ್ತೆಯಾದ ಜೈನ್ ಕಾಲೇಜಿನ ಮುಂಭಾಗ ಅವೈಜ್ಞಾನಿಕ ಮೋರಿ ನಿರ್ಮಾಣದ ಹಿನ್ನೆಲೆಯಲ್ಲಿ ಜೈನ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಕರೆ ನಿರ್ಮಾಣವಾಗಿತ್ತು, ಅದರಂತೆ ಹೊಸ ರಸ್ತೆಗಳ ನಿರ್ಮಾಣ ಮಾಡುತ್ತಿರುವ ರಾಜ್‌ಕುಮಾರ್ ವೃತ್ತದ ರಸ್ತೆಯ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷಿಸಿದೆ, ಇನ್ನೂ ಬಿ.ಎಂ. ರಸ್ತೆಯ ಮಳೆ ನೀರು ಸಂಪೂರ್ಣವಾಗಿ ಹರಿದು ನ್ಯಾಯಾಲಯದ ಮುಂಬಾಗದ ರಸ್ತೆಯೂ ಕೆರೆಯಂತಾಗಿತ್ತು.ಬಾಕ್ಸ್

ಅವೈಜ್ಞಾನಿಕ ಚರಂಡಿಗಳ ನಿರ್ಮಾಣ: ನಗರದಲ್ಲಿ ಉತ್ತಮ ಚರಂಡಿಗಳನ್ನು ನಿರ್ಮಾಣ ಮಾಡುವುದು ಮಳೆ ನೀರು ಹರಿಯಲು,ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದ ಮಳೆ ನೀರು ರಸ್ತೆಯ ಮೆಲೆ ಹರಿದು ಕ್ಯೋಟ್ಯಾಂತರ ರುಪಾಯಿಗಳ ರಸ್ತೆಗಳು ಹದಗೆಟ್ಟಿವೆ, ಪ್ರಮುಖ ಮುಖ್ಯ ರಸ್ತೆಗಳು ಆಗಬಹುದು, ಬಡಾವಣೆಯ ರಸ್ತೆಗಳು ಆಗಬಹುದು ಮಳೆ ನೀರು ಚರಂಡಿಯಲ್ಲಿ ಹರಿಯುವುದು ಬಿಟ್ಟು ರಸ್ತೆಯಲ್ಲಿ ಹರಿಯುತ್ತದೆ ಅವೈಜ್ಞಾನಿಕ ಚರಂಡಿ ಕಾಮಗಾರಿಗಳಿಂದ ಜನರು ಹೈರಣಾಗಿದ್ದಾರೆ. ೩೦ಕೆಜಿಎಫ್೧ರಾಜ್‌ಕುಮಾರ್ ವೃತ್ತದ ರಸ್ತೆಯಲ್ಲಿ ಹರಿಯುತ್ತಿರುವ ಮಳೆನೀರು ಮತ್ತು ಚರಂಡಿ ನೀರು೩೦ಕೆಜಿಎಫ್೨ಬಿ.ಎಂ.ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು.