ಶನಿವಾರಸಂತೆ ಹೋಬಳಿಯಲ್ಲಿ ವ್ಯಾಪಕ ಮಳೆ: ಮರ ಉರುಳಿ ಹಾನಿ

| Published : Jul 27 2024, 12:50 AM IST

ಶನಿವಾರಸಂತೆ ಹೋಬಳಿಯಲ್ಲಿ ವ್ಯಾಪಕ ಮಳೆ: ಮರ ಉರುಳಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು ವ್ಯಾಪಕ ಹಾನಿಯಾಗಿದೆ.ಶುಕ್ರವಾರ ಬೆಳಗ್ಗೆ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯ ಮಾಲಂಬಿ-ಕಣಿವೆಬಸವನಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ರಸ್ತೆ ಸಮಿಪದ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದುಸಂಚಾರಕ್ಕೆ ಅಡ್ಡಿ ಆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು ವ್ಯಾಪಕ ಹಾನಿಯಾಗಿದೆ.ಶುಕ್ರವಾರ ಬೆಳಗ್ಗೆ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯ ಮಾಲಂಬಿ-ಕಣಿವೆಬಸವನಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ರಸ್ತೆ ಸಮಿಪದ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದು ಹೋಗಿದೆ. ಮರ ರಸ್ತೆ ಬದಿಯಲ್ಲಿ ಹಾದು ಹೋಗಿರುವ ೧೧ ಕೆ.ವಿ.ವಿದ್ಯುತ್ ಮಾರ್ಗದ ತಂತಿಯ ಬಿದ್ದು ಹೋಗಿದ್ದರಿಂದ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಮರದ ಬೃಹತ್ ಗಾತ್ರದ ಕೊಂಬೆಗಳು ಪಕ್ಕದ ಕಾಫಿ ಬೆಳೆಗಾರ ಎನ್.ಬಿ.ನಾಗಪ್ಪ ಎಂಬವರ ಮನೆ ಮುಂಭಾಗದ ತಡೆಗೋಡೆ ಮತ್ತು ಕೊಟ್ಟಿಗೆ ಮೇಲೆ ಬಿದ್ದಿರುವುದರಂದ ತಡೆಗೋಡೆ ಮತ್ತು ದನದ ಕೊಟ್ಟಿಗೆ ಜಖಂಗೊಂಡಿದೆ.

ಇದೆ ವೇಳೆಯಲ್ಲಿ ಆಲೂರುಸಿದ್ದಾಪುರ ಚೆಸ್ಕಾಂ ಶಾಖೆಯ ಜೆಇ ಮತ್ತು ಸಿಬ್ಬಂದಿ ಇದೇ ಮರದ ಸಮಿಪದಲ್ಲಿ ಮತ್ತೊಂದು ವಿದ್ಯುತ್ ಮಾರ್ಗದ ಬೀಳುವ ಹಂತದಲ್ಲಿದ್ದ ವಿದ್ಯುತ್ ಕಂಬವೊಂದನ್ನು ದುರಸ್ತಿ ಪಡಿಸುತ್ತಿದ್ದಾಗಲೇ ಮರ ಧರೆಗುರುಳಿದೆ. ಕೂದಳೆಯ ಅಂತರದಲ್ಲಿ ಚೆಸ್ಕಾಂ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಮರ ಬೀಳುವ ಸಂದರ್ಭದಲ್ಲಿ ಚೆಸ್ಕಾಂ ಸಿಬ್ಬಂದಿ ಪಕ್ಕದಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರದ ಪುಟ್ಟ ಕೊಂಬೆ ಬಿದ್ದಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವರೆಗೂ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಸ್ಥಗಿತಗೊಳಿಸಲಾಗಿತು. ಚೆಸ್ಕಾಂ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬಿದ್ದು ಹೋಗಿದ್ದ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಸ್ಥಳಕ್ಕೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.