ಭಾರಿ ಗಾಳಿ ಮಳೆ: ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಹಾನಿ

| Published : Mar 26 2025, 01:33 AM IST

ಭಾರಿ ಗಾಳಿ ಮಳೆ: ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಿಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪೆರೆದಿದೆ. ಭಾರಿ ಗಾಳಿ, ಸಿಡಿಲು, ಮಳೆಯಿಂದಾಗಿ ವಿದ್ಯುತ್ ಪೂರೈಕೆ ವ್ಯತ್ಯಯ ಕಂಡಿತು. ಕಾರ್ಕಳ ತಾಲೂಕಿನಲ್ಲಿ ಭಾರಿ ಗಾಳಿಗೆ ಸಣ್ಣ ಪುಟ್ಟ ಹಾನಿ ಸಂಭವಿಸಿವೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಿಗೆ ಮಂಗಳವಾರ ಸಂಜೆ ಸುರಿದ ಮಳೆ ತಂಪೆರೆದಿದೆ. ಭಾರಿ ಗಾಳಿ, ಸಿಡಿಲು, ಮಳೆಯಿಂದಾಗಿ ವಿದ್ಯುತ್ ಪೂರೈಕೆ ವ್ಯತ್ಯಯ ಕಂಡಿತು. ಕಾರ್ಕಳ ತಾಲೂಕಿನಲ್ಲಿ ಭಾರಿ ಗಾಳಿಗೆ ಸಣ್ಣ ಪುಟ್ಟ ಹಾನಿ ಸಂಭವಿಸಿವೆ.

ಕಾರ್ಕಳ ತಾಲೂಕಿನಲ್ಲಿ ಬುಧವಾರ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ ಬಜಗೋಳಿ, ಮಾಳ, ಮಿಯ್ಯಾರು, ನೆಲ್ಲಿಕಾರು, ಹೊಸ್ಮಾರು, ಈದು, ಕೆರುವಾಶೆ, ಮಾಳ, ಶಿರ್ಲಾಲು, ರೆಂಜಾಳ, ಮರ್ಣೆ ಭಾಗಗಳಲ್ಲಿ ಮಳೆಯಾಗಿದೆ.

ಇದರಿಂದಾಗಿ ತಾಪಮಾನದಲ್ಲಿ ಕೊಂಚ ಮಟ್ಟಿಗೆ ಇಳಿಮುಖವಾದಂತಾಗಿದೆ. ಹೆಬ್ರಿ ತಾಲೂಕಿನ ಹೆಬ್ರಿ ಪೇಟೆ, ಅಂಡಾರು, ಮುನಿಯಾಲು ,ಮುಟ್ಲುಪಾಡಿಗಳಲ್ಲಿ ಉತ್ತಮ ಮಳೆಯಾಗಿದೆ.

ಕಾರ್ಕಳ ಹಾಗು ಹೆಬ್ರಿ ತಾಲೂಕು ಬಸ್ ನಿಲ್ದಾಣಗಳಲ್ಲಿ ಏಕಾಏಕಿ ಸುರಿದ ಮಳೆಗೆ ಪ್ರಯಾಣಿಕರು ಆತಂಕಕ್ಕೊಳಗಾದರು. ಕಾಲೇಜಿನಿಂದ ಹೊರಟ ವಿದ್ಯಾರ್ಥಿಗಳು ಒದ್ದೆಯಾಗಿಕೊಂಡೆ ಮನೆಗೆ ಸಾಗಬೇಕಾಯಿತು

ಭಾಳಿ ಗಾಳಿ ಅಬ್ಬರಕ್ಕೆ ಕಾರ್ಕಳದಲ್ಲಿ ಅನೇಕ ಫಲಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಆನೆಕೆರೆ ಬಳಿ ಅಂಗಡಿಯ ಶೀಟ್‌ಗಳು ಹಾರಿ ಹೋಗಿದ್ದು ರಸ್ತೆಗೆ ಬಿದ್ದಿರುವುದು ಕಂಡುಬಂತು. ಕಾರ್ಕಳ ಎಲ್‌ಐಸಿ ಕಚೇರಿ ಬಳಿ ಮರ ಬಿದ್ದು ಕಾರ್ಕಳ ನಗರ ಹಾಗು ಕಲ್ಲೊಟ್ಟೆ ನಡುವಿನ ಸಂಚಾರ ಮೊಟಕುಗೊಂಡಿತು.

ಕಾರ್ಕಳ ಪೇಟೆ ಕುಕ್ಕುಂದೂರು, ಮಿಯಾರು, ಮಾಳ, ಬಜಗೋಳಿ ಹೆಬ್ರಿ ಕಡ್ತಲ ಕಬ್ಬಿನಾಲೆ ,ಮುನಿಯಾಲು ಗ್ರಾಮಗಳಲ್ಲಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ.