ಸೋಮವಾರಪೇಟೆ: ಭಾರಿ ಗಾಳಿ ಬೀಸಿ ವಿದ್ಯುತ್‌ ಕಂಬಗಳಿಗೆ ಹಾನಿ

| Published : Jul 29 2024, 01:02 AM IST

ಸೋಮವಾರಪೇಟೆ: ಭಾರಿ ಗಾಳಿ ಬೀಸಿ ವಿದ್ಯುತ್‌ ಕಂಬಗಳಿಗೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಭಾರೀ ಗಾಳಿ ಬೀಸುತ್ತಿದೆ. ಅಲ್ಲಲ್ಲಿ ಮರಗಳು ಉರುಳುತ್ತಿದೆ. ಶನಿವಾರ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನಲ್ಲಿ ಮಳೆಯ ಆರ್ಭಟ ಕಡಿಮೆಯಾದರೂ, ಭಾರಿ ಗಾಳಿ ಬೀಸುತ್ತಿದ್ದು, ಅಲ್ಲಲ್ಲಿ ಮರಗಳು ಉರುಳುತ್ತಿವೆ.

ಶನಿವಾರ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಆದರೆ, ಗಾಳಿ ಎಂದಿನಂತೆ ಬೀಸುತ್ತಿದೆ. ತಾಲೂಕಿನ ಕೂತಿ ಗ್ರಾಮದ ಮುಖ್ಯ ರಸ್ತೆಯಲಿ ಬೃಹತ್ ಮರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುವ 11 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಉರುಳಿ ನಾಲ್ಕಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕೆಲವೇ ದಿನಗಳಲ್ಲಿ ಈ ಮಾರ್ಗವನ್ನು ಸರಿಪಡಿಸಿ ಈ ಭಾಗದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು.

ಭಾರಿ ಗಾಳಿ ಮಳೆಗೆ ತೋಳೂರುಶೆಟ್ಟಳ್ಳಿ ಗ್ರಾಮದ ಜಾನಕಿ ಎಂಬುವವರ ವಾಸದ ಮನೆಯ ಗೋಡೆ ಮತ್ತು ಮೇಲ್ಚಾವಣಿ ಬಿದ್ದು ಹಾನಿಯಾಗಿದೆ. ಬಜೆಗುಂಡಿ ಗ್ರಾಮದ ಶಿವಪ್ಪ ಅವರ ವಾಸದ ಮನೆ ಕುಸಿದಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಜಿ.ಟಿ. ದೇವಯ್ಯ ಅವರ ಮನೆಯ ಒಂದು ಭಾಗ ಕುಸಿದಿದೆ. ಬೆಂಬಳೂರು ಗ್ರಾಮದ ಮಂಜುನಾಥ ಅವರ ವಾಸದ ಮನೆಗೆ ಹಾನಿಯಾಗಿದೆ. ಅದೇ ಗ್ರಾಮದ ವನಜಾಕ್ಷಿ ಎಂಬುವವರ ಮನೆಗೆ ಹಾನಿಯಾಗಿದೆ. ಭಾರಿ ಮಳೆಯಿಂದ ಸಮೀಪದ ಅಬ್ಬಿಮಠ ಗ್ರಾಮದಲ್ಲಿ ಕೊಲ್ಲಿ ತುಂಬಿ ಹರಿಯುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ.