ಸಾರಾಂಶ
ಬೆಳಗಾವಿ : ವಾಹನ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರ ಆರೋಗ್ಯ ವಿಚಾರಣೆಗೆ ಮಠಾಧೀಶರು ಆಸ್ಪತ್ರೆಗೆ ಭೇಟಿ ನೀಡಿದರು.
ಕೂಡಲಸಂಗಮ ಬಸವ ಪ್ರಕಾಶ ಸ್ವಾಮೀಜಿ ಮತ್ತು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ, ಸಚಿವೆ ಹೆಬ್ಬಾಳಕರ ಆರೋಗ್ಯ ವಿಚಾರಿಸಿದರು.
ಹೆಬ್ಬಾಳಕರಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ. ಇನ್ನೂ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುವುದು. ವೈದ್ಯರ ಸಲಹೆ ಮೇರೆಗೆ ತಾಯಿಗೆ ದ್ರವ ರೂಪದ ಆಹಾರ ಮಾತ್ರ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ ತಿಳಿಸಿದರು.
ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಶೀಘ್ರ ಗುಣಮುಖರಾಗಲೆಂದು ಮಾರಿಹಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಗುಡದಮ್ಮ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಪೂಜೆ ನಡೆಸಲಾಯಿತು. ಸುಳೇಬಾವಿ ಗ್ರಾಮದ ಮಹಾಲಕ್ಷ್ಮೀ ದೇವಿಗೆ ರಾಜ್ಯ ವಶೇಷಚೇತನ ಹಾಗೂ ಗೌರವಧನ ಪುನರ್ವಸತಿ ಕಾರ್ಯಕರ್ತರು ವಿಶೇಷ ಹೋಮ, ಹವನ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇನ್ನು ನಾಲ್ಕು ದಿನದ ಬಳಕ ಅವರನ್ನು ಆಸ್ಪತ್ರೆಯಿಂದ ಡೀಸಾರ್ಜ್ ಮಾಡಲಾಗುವುದು. ಬಳಿಕಅವರು ಒಂದು ತಿಂಗಳಕಾಲ ವಿಶ್ರಾಂತಿ ಪಡೆಯುವಂತೆಸಲಹೆ ನೀಡಲಾಗಿದೆ.
-ಡಾ.ರವಿ ಪಾಟೀಲ ವೈದ್ಯರು ವಿಜಯಾ ಆಸ್ಪತ್ರೆ