ಸಾರಾಂಶ
ಉಡುಪಿಯ ರೊಬೊಸಾಫ್ಟ್ ಟೆಕ್ನಾಲಜೀಸ್, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ರೋಟರಿ ಕ್ಲಬ್ ಮಣಿಪಾಲ, ಹೆಬ್ರಿಯ ರೋಟರಿ ಸಮುದಾಯ ದಳ, ಹೆಬ್ರಿ ಗ್ರಾಮ ಪಂಚಾಯಿತಿ ಮತ್ತು ಧನಲಕ್ಷ್ಮೀ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ೧೦ ದಿನಗಳ ವಿವಿಧ ರೀತಿಯ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹೆಬ್ರಿಯ ಸಮುದಾಯ ಭವನದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಹೆಬ್ರಿ
ಉಡುಪಿಯ ರೊಬೊಸಾಫ್ಟ್ ಟೆಕ್ನಾಲಜೀಸ್, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ರೋಟರಿ ಕ್ಲಬ್ ಮಣಿಪಾಲ, ಹೆಬ್ರಿಯ ರೋಟರಿ ಸಮುದಾಯ ದಳ, ಹೆಬ್ರಿ ಗ್ರಾಮ ಪಂಚಾಯಿತಿ ಮತ್ತು ಧನಲಕ್ಷ್ಮೀ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ೧೦ ದಿನಗಳ ವಿವಿಧ ರೀತಿಯ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹೆಬ್ರಿಯ ಸಮುದಾಯ ಭವನದಲ್ಲಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಹೆಬ್ರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ತಾರಾನಾಥ ಬಂಗೇರ ಮಾತನಾಡುತ್ತಾ, ಹೆಬ್ರಿ ಗ್ರಾಮದ ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಗ್ರಾಮ ಪಂಚಾಯಿತಿ ನೀಡುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹೆಬ್ರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಮಣಿಪಾಲದ ಬಿವಿಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಜಗದೀಶ್ ಪೈ, ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮತ್ತು ಅದರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಮಹಿಳೆಯರು ಸ್ವಉದ್ಯೋಗ ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಬೇಕು ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಮಣಿಪಾಲ ರೋಟರಿಯ ಕಾರ್ಯದರ್ಶಿ ರೋ. ಫರೀದ ಉಪ್ಪಿನ್, ರಾಜವರ್ಮ ಅರಿಗ, ಹೆಬ್ರಿಯ ಸಮುದಾಯ ದಳದ ಅಧ್ಯಕ್ಷ ಕೃಷ್ಣರಾಜ್ ಕೆ., ರಾಮಕೃಷ್ಣ ಆಚಾರ್, ಹೆಬ್ರಿ ಎನ್‌ಆರ್‌ಎಲ್‌ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ, ಧನಲಕ್ಷ್ಮೀ ಸಂಜೀವಿನಿ ಒಕ್ಕೂಟ ಕಾರ್ಯದರ್ಶಿ ಶಕುಂತಲಾ ಹಾಗೂ ಸಂಪನ್ಮೂಲ ವ್ಯಕ್ತಿ ರಶ್ಮಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೋಟರಿ ಸಮುದಾಯ ದಳದ ಕಾರ್ಯದರ್ಶಿ ನಿತ್ಯಾನಂದ ಭಟ್ ಸ್ವಾಗತಿಸಿ, ನಿರೂಪಿಸಿದರು. ಸಂಜೀವಿನಿ ಸಂಘದ ಎಂಬಿಕೆ ನಾಗಾನಂದಿನಿ ಧನ್ಯವಾದವಿತ್ತರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸಹಕರಿಸಿದರು. ಸುಮಾರು ೨೫ ಮಂದಿ ಮಹಿಳೆಯರು ಭಾಗಹಿಸಿದ್ದರು.