ಹೆಬ್ರಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಡಿ. 21ರಂದು ನಾಗಕನ್ನಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅರಸಮ್ಮಕಾನು ಶೇಡಿಮನೆಯಲ್ಲಿ ನಡೆಯಿತು.

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ವತಿಯಿಂದ ಹೆಬ್ರಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಡಿ. 21ರಂದು ನಾಗಕನ್ನಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅರಸಮ್ಮಕಾನು ಶೇಡಿಮನೆಯಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಸಾಪ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಗೌರವ ಕಾರ್‍ಯದರ್ಶಿ ಮಂಜುನಾಥ ಕುಲಾಲ್ ಶಿವಪುರ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್‍ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ದಯಾನಂದ ಪೂಜಾರಿ ಭಾಗವಹಿಸಿ, ಸಲಹೆ ಸೂಚನೆ ನೀಡಿ ಸಂಪೂರ್ಣ ಸಹಕಾರ ಘೋಷಿಸಿದರು.

2026ರ ಫೆಬ್ರವರಿಯಲ್ಲಿ ಅರಸಮ್ಮಕಾನು ಶೇಡಿಮನೆಯಲ್ಲಿ ಹೆಬ್ರಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಣಯಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಅರಸಮ್ಮಕಾನು, ಕಾರ್‍ಯಾಧ್ಯಕ್ಷರಾಗಿ ಶಂಕರ ಪೂಜಾರಿ ಹಾಗೂ ಸಂಚಾಲಕರಾಗಿ ರಾಧಾಕೃಷ್ಣ ಕ್ರಮಧಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಮುಂದಿನ ಕಾರ್ಯ ಚಟುವಟಿಕೆಗಳಿಗಾಗಿ ಮತ್ತೊಮ್ಮೆ ಸಭೆ ನಡೆಸಿ ವಿವಿಧ ಸಮಿತಿಗಳನ್ನು ರಚಿಸುವುದಾಗಿ ತೀರ್ಮಾನಿಸಲಾಯಿತು. ನವೀನ ಶೆಟ್ಟಿ ಮಡಾಮಕ್ಕಿ ಸ್ವಾಗತಿಸಿ, ಮಹೇಶ ಹೈಕಾಡಿ ನಿರೂಪಿಸಿ, ಗಣೇಶ ಅರಸಮ್ಮಕಾನು ಧನ್ಯವಾದ ಸಲ್ಲಿಸಿದರು.