ಸಾರಾಂಶ
ಬೆಳಗಾವಿ, ಹಾವೇರಿ ಘಟನೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವೆಂಬುದು ಸಾಬೀತುಪಡಿಸಿವೆ. ಹಾನಗಲ್‌ನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿ ನಂತರ ಹಾನಗಲ್ ಘಟನೆ ಮರುಕಳಿಸಿದೆ. ಇಂತಹ ದುಷ್ಕರ್ಮಿಗಳ ಎನ್‌ಕೌಂಟರ್ ಮಾಡಿ, ಬಿಸಾಡಬೇಕು. ಗಲ್ಲಿಗೇರಿಸಬೇಕು.
ಆರೋಗ್ಯಕರ ಟೀಕೆ, ಟಿಪ್ಪಣಿ ಇರಲಿ: ಮಾಜಿ ಸಚಿವ ಕಿವಿಮಾತು
ಕನ್ನಡಪ್ರಭ ವಾರ್ತೆ ದಾವಣಗೆರೆಅನಂತಕುಮಾರ ಹೆಗಡೆ ಏಕವಚನ ಬಳಸಿದ್ದನ್ನು ನಾನು ಒಪ್ಪಲ್ಲ. ಹಾಗೆಂದು ಸಿಎಂ ಸಿದ್ದರಾಮಯ್ಯ ಹಿಂದೆ ಏಕವಚನ ಬಳಸಿದ್ದನ್ನೂ ಒಪ್ಪಲ್ಲ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಇದೇ ಸಿದ್ದರಾಮಯ್ಯ ಏಕವಚನದಲ್ಲೇ ಮಾತನಾಡಿದ್ದರು. ಯಾರೂ ಹೀಗೆ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಗೆ ಒಂದು ಸಿದ್ಧಾಂತವಿದೆ. ಪಕ್ಷವು ನಮಗೆ ಸಂಸ್ಕಾರ ಕಲಿಸಿದೆ. ಅನಂತಕುಮಾರ ಹೆಗಡೆ ಆಗಲಿ, ಸಿದ್ದರಾಮಯ್ಯನವರೇ ಆಗಿರಲಿ ಯಾರೇ ಆಗಿದ್ದರೂ ಯಾರ ಬಗ್ಗೆಯೂ ಏಕವಚನದಲ್ಲಿ ಮಾತನಾಡಬಾರದು. ಆರೋಗ್ಯಕರ ಟೀಕೆ, ಟಿಪ್ಪಣಿ ಇರಲಿ ಎಂದು ಸಲಹೆ ನೀಡಿದರು.ದುಷ್ಕರ್ಮಿಗಳ ಎನ್‌ಕೌಂಟರ್ ಮಾಡಿ:
ಬೆಳಗಾವಿ, ಹಾವೇರಿ ಘಟನೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವೆಂಬುದು ಸಾಬೀತುಪಡಿಸಿವೆ. ಹಾನಗಲ್‌ನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿ ನಂತರ ಹಾನಗಲ್ ಘಟನೆ ಮರುಕಳಿಸಿದೆ. ಇಂತಹ ದುಷ್ಕರ್ಮಿಗಳ ಎನ್‌ಕೌಂಟರ್ ಮಾಡಿ, ಬಿಸಾಡಬೇಕು. ಗಲ್ಲಿಗೇರಿಸಬೇಕು ಎಂದು ಹರಿಹಾಯ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾನಗಲ್, ಬೆಳಗಾವಿಗೆ ಭೇಟಿ ನೀಡಿ, ಸಂತ್ರಸ್ಥರಿಗೆ ಧೈರ್ಯ, ಸಾಂತ್ವನ ಹೇಳಬೇಕು. ಮಹಿಳೆಯ ಮೇಲೆ ಗುಂಪು ಅತ್ಯಾಚಾರ ಎಸಗಿದ ದುಷ್ಕರ್ಮಿಗಳನ್ನು ಎನ್‌ಕೌಂಟರ್ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮುಂದೆ ಇಂತಹ ಘಟನೆಗಳು ಮರು ಕಳಿಸದಂತೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.