ಹೆಗ್ಗಡೆ ಪರಿವಾರ ಗುರಿ ಮಾಡಿ ಆರೋಪ

| Published : Aug 13 2025, 12:30 AM IST

ಸಾರಾಂಶ

ಮನಸ್ಸಿನಲ್ಲಿಯೂ ಯಾರನ್ನೂ ದ್ವೇಷ ಮಾಡದವರು ಕೊಲೆ ಮಾಡಲು ಸಾಧ್ಯವಿಲ್ಲ

ಶಿರಸಿ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪರಿವಾರವನ್ನು ಗುರಿಯನ್ನಾಗಿಸಿ ಕೆಲ ಅತೃಪ್ತರು ಹೇಳಿಕೆ ನೀಡುತ್ತಿದ್ದಾರೆ. ಅಹಿಂಸಾ ಧರ್ಮ ಪಾಲನೆ ಮಾಡುತ್ತಿರುವವರು ಕೊಲೆ ಮಾಡುವಂತಹ ಕ್ರೂರರಲ್ಲ ಎಂದು ಸೋದೆ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶ್ರೀಗಳು, ಮನಸ್ಸಿನಲ್ಲಿಯೂ ಯಾರನ್ನೂ ದ್ವೇಷ ಮಾಡದವರು ಕೊಲೆ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಿ ಸಂಪೂರ್ಣ ಜವಾಬ್ದಾರಿ ವಹಿಸಿದೆ. ಎಸ್‌ಐಟಿ ತನಿಖೆ ನಿಷ್ಪಕ್ಷಪಾತ ನಡೆಯಬೇಕು. ಅವರ ಮೇಲೆ ಯಾವುದೇ ಒತ್ತಡ ತರಬಾರದು. ತನಿಖೆ ನಡೆಯುವಾಗ ಯಾರೂ ಮಾತನಾಡಬಾರದು. ಇಲ್ಲಿ ನಾವೇ ತೀರ್ಪು ಕೊಡೋದಲ್ಲ. ತನಿಖೆಯ ಬಳಿಕ ನ್ಯಾಯಾಂಗ ಯಾವ ತೀರ್ಪು ನೀಡುತ್ತೋ ಅದನ್ನು ನಾವು ಸ್ವಾಗತಿಸುತ್ತೇವೆ. ಹೆಗ್ಗಡೆ ಪರಿವಾರದ ಮನೋಸ್ಥೈರ್ಯ ಹೆಚ್ಚಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಶ್ರೀ ಕ್ಷೇತ್ರ ಯಾವಾಗಲೂ ಹೆಗ್ಗಡೆ ಪರಿವಾರದ ಜತೆಯಿದೆ. ಮುಂದಿನ ದಿನಗಳಲ್ಲಿ ಸುಖದಿಂದ ಇರಲು ಪ್ರಾರ್ಥಿಸುತ್ತೇನೆ ಎಂದರು.