ಸ್ವಚ್ಛತೆ ಕಡೆಗೆ ಪ್ರಮುಖ ಹೆಜ್ಜೆಯಾಗಿ ಈಗಾಗಲೇ ಶಾಲಾ-ಕಾಲೇಜು ಆವರಣ ವಾರ್ಡ್‌ವಾರು ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಬಹುತೇಕ ಕಡೆ ಕಂಡ ಕಂಡಲ್ಲಿ ಕಸ ಹಾಕುವುದನ್ನು ಹಲವರು ರೂಢಿ ಮಾಡಿಕೊಂಡಿದ್ದರು. ಅದನ್ನು ತಪ್ಪಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಸರ್ವೇಕ್ಷಣ ಕಾರ್ಯ ನಡೆಯುತ್ತಿದೆ.
ಮಂಡ್ಯ:
ನಾಗರಿಕರು ಸ್ವಚ್ಛತೆಗೆ ಆದ್ಯತೆ ನೀಡಿ ಕಸಮುಕ್ತ ಮಂಡ್ಯ ಮಾಡುವ ಗುರಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ಸ್ವರ್ಣಸಂದ್ರ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರ ಉದ್ಯಾನವನದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ಸ್ವಚ್ಛತಾ ಸರ್ವೇಕ್ಷಣ ಕಾರ್ಯಕ್ರಮದಲ್ಲಿ ಸಸಿನೆಟ್ಟು ಮಾತನಾಡಿ, ಸ್ವಚ್ಛತೆ ಕಡೆಗೆ ಪ್ರಮುಖ ಹೆಜ್ಜೆಯಾಗಿ ಈಗಾಗಲೇ ಶಾಲಾ-ಕಾಲೇಜು ಆವರಣ ವಾರ್ಡ್‌ವಾರು ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಬಹುತೇಕ ಕಡೆ ಕಂಡ ಕಂಡಲ್ಲಿ ಕಸ ಹಾಕುವುದನ್ನು ಹಲವರು ರೂಢಿ ಮಾಡಿಕೊಂಡಿದ್ದರು. ಅದನ್ನು ತಪ್ಪಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಸರ್ವೇಕ್ಷಣ ಕಾರ್ಯ ನಡೆಯುತ್ತಿದೆ. ನಗರಸಭೆಯ ಆಯುಕ್ತರು, ಸಿಬ್ಬಂದಿ ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ವಿಶೇಷ ಆಸಕ್ತಿ ವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ನಾಗರಿಕರೂ ಕೂಡ ಎಲ್ಲೆಂದರಲ್ಲಿ ಕಸ ಬಿಸಾಡಿ ಬಳಿಕ ನಗರಸಭೆಯವರು ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ ಎಂದು ದೂರುವುದನ್ನು ಕಂಡಿದ್ದೇವೆ. ಹಾಗಾಗಿ ಸ್ವಚ್ಛತಾ ಸರ್ವೇಕ್ಷಣ ಕಾರ್ಯ ಒಂದು ಪ್ರಮುಖ ಹೆಜ್ಜೆಯಾಗಿ ಕಂಡು ಬಂದಿದೆ. ಜನರು ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಸ್ವಚ್ಛತಾ ಸಿಬ್ಬಂದಿಗೆ ನೀಡಿದಾಗ ಸೂಕ್ತ ರೀತಿಯಲ್ಲಿ ವಿಲೇವಾರಿ ಆಗಲು ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ಉದ್ಯಾನವನದಲ್ಲಿ ಸಸಿ ನೆಟ್ಟು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಪ್ರಮಾಣ ಬೋಧಿಸಿದರು. ನಗರಸಭೆ ಆಯುಕ್ತರಾದ ಯು.ಪಿ.ಪಂಪಾಶ್ರೀ, ನಗರಾಭಿವೃದ್ಧಿ ಕೋಶದ ಅಧಿಕಾರಿ ನರಸಿಂಹಮೂರ್ತಿ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಎಂ.ಆರ್.ಮಂಜುನಾಥ್, ಪರಿಸರ ಅಧಿಕಾರಿ ಅಶ್ವಥ್ ಹಾಗೂ ಸ್ವಚ್ಛತಾ ಸರ್ವೇಕ್ಷಣಾ ಕಾರ್ಯಕ್ರಮದ ಸಿಬ್ಬಂದಿ ಪಾಲ್ಗೊಂಡಿದ್ದರು.ಮಂಡ್ಯಕ್ಕೆ ಸ್ವಚ್ಛನಗರ ಪ್ರಶಸ್ತಿ ಬರಲು ಶ್ರಮಿಸಿ: ಪೌರಾಯುಕ್ತೆ ಪಂಪಾಶ್ರೀಮಂಡ್ಯ:
ಮಂಡ್ಯಕ್ಕೆ ಸ್ವಚ್ಛನಗರ ಬಹುಮಾನ ಬರಲು ಪ್ರತಿಯೊಬ್ಬರು ಕಾರಣಿಭೂತರಾಗಬೇಕು ಎಂದು ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ತಿಳಿಸಿದರು.ನಗರದ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಗರಸಭೆಯಿಂದ ಸ್ವಚ್ಛ ಭಾರತ್ ಮಿಷನ್ ಅಡಿ ನಡೆದ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮವನ್ನು ನಗರದಾದ್ಯಂತ 35 ವಾರ್ಡ್ ಗಳಲ್ಲಿ ಹಮ್ಮಿಕೊಂಡು ಶಾಲಾ-ಕಾಲೇಜುಗಳು, ಕಲ್ಯಾಣಿಗಳು, ದೇವಸ್ಥಾನಗಳು, ಪಾರ್ಕ್ ಗಳಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡಿದವರಿಗೆ ದಂಡ ವಿಧಿಸಲಾಗುವುದು. ಸಾರ್ವಜನಿಕರು ಬಟ್ಟೆ ಬ್ಯಾಗನ್ನು ಉಪಯೋಗಿಸಬೇಕು. ನಿಮ್ಮ ಮನೆಯ ಮತ್ತು ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಇದಕ್ಕೆ ಎಲ್ಲಾ ನಾಗರೀಕರು ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶೇಖರ್, ನಗರಸಭೆ ಆರೋಗ್ಯ ನಿರೀಕ್ಷಕರಾದ ಅಶ್ವಥ್, ಮಂಜೇಶ್, ಮನು, ಕಚೇರಿ ವ್ಯವಸ್ಥಾಪಕಿ ಕಲ್ಪಗೌಡ, ಅಕೌಂಟೆಂಟ್, ಮಂಜುನಾಥ್, ಕಂದಾಯ ಅಧಿಕಾರಿ ರಾಜಶೇಖರ್, ಸಮುದಾಯ ಸಂಘಟಕ ತುಳಸಿದಾಸ್, ಮುಖ್ಯ ಶಿಕ್ಷಕಿ ಜ್ಯೋತಿ, ಲೀಲಾವತಿ, ಸುಬ್ರಹ್ಮಣ್ಯ, ಮಲ್ಲೇಶ್ ಇತರರಿದ್ದರು,