ಸಾರಾಂಶ
ಮೊದಲ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪುಸ್ತಕ ಮಾರಾಟದಿಂದ ಬಂದ ₹25 ಸಾವಿರ ಹಣವನ್ನು ತಾಲೂಕಿನ ಇಬ್ಬರು ಬಡ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದಾರೆ.
ಭಟ್ಕಳ: ಕವನ ಸಂಕಲನ ಮಾರಾಟದಿಂದ ಬಂದ ಹಣವನ್ನು ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ನೀಡುವುದರ ಮೂಲಕ ಇಲ್ಲಿಯ ಬೆಳಕೆಯ ದಂಪತಿಗಳು ತಮ್ಮ ಮದುವೆಯ ಪ್ರಥಮ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.
ಕಳೆದ ವರ್ಷ ಫೆ. 4ರಂದು ಬೆಳಕೆಯ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದೇ ದಿನ ಮದುಮಗ ಗಣಪತಿ ನಾಯ್ಕ ತಾವೇ ರಚಿಸಿದ ನೀ ಬರೆಸಿದಂತೆ ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ. ಸೈಯದ್ ಜಮೀರುಲ್ಲಾ ಷರೀಫ್ ಅವರಿಂದ ಬಿಡುಗಡೆಗೊಳಿಸಿದ್ದರು.ಗಣಪತಿ ನಾಯ್ಕ ವೃತ್ತಿಯಲ್ಲಿ ರೇಡಿಯಂ ಡಿಸೈನಿಂಗ್ ಮಾಡುತ್ತಿದ್ದು, ತಮ್ಮ ಸ್ನೇಹಿತರ ಜತೆ ಸೇರಿಕೊಂಡು ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ. ಪುಸ್ತಕ ಮಾರಾಟದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ಅಂದು ತಿಳಿಸಿದಂತೆ ಮೊದಲ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪುಸ್ತಕ ಮಾರಾಟದಿಂದ ಬಂದ ₹25 ಸಾವಿರ ಹಣವನ್ನು ತಾಲೂಕಿನ ಇಬ್ಬರು ಬಡ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದಾರೆ.
ಫೆ. 4 ವಿಶ್ವ ಕ್ಯಾನ್ಸರ್ ದಿನವೂ ಆಗಿದ್ದರಿಂದ ದಂಪತಿಗಳು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾನ್ಸರ್ ರೋಗಿಗಳಾದ 6 ವರ್ಷದ ಬಾಲಕನಿಗೆ ಹಾಗೂ ಓರ್ವ ಮಹಿಳೆಗೆ ಈ ಹಣವನ್ನು ನೀಡಿದರು. ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಾ. ಲಕ್ಷ್ಮೀಶ ನಾಯ್ಕ ಡಾ. ಸುರಕ್ಷಿತ ಶೆಟ್ಟಿ ಮುಂತಾದವರಿದ್ದರು. ದಿವೇಕರ ಪಪೂ ಕಾಲೇಜಿನ ಸ್ನೇಹ ಸಮ್ಮೇಳನಕಾರವಾರ: ಇಲ್ಲಿನ ದಿವೇಕರ ಪಪೂ ವಾಣಿಜ್ಯ ಮಹಾವಿದ್ಯಾಲಯದ ಸ್ನೇಹ ಸಮ್ಮೇಳನ ಇತ್ತೀಚೆಗೆ ಜರುಗಿತು.
ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೇಶವ ಕೆ.ಜಿ. ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ಮಹತ್ವ ಎಷ್ಟು ಮಹತ್ವ ಪೂರ್ಣವಾಗಿರುತ್ತದೆ ಎಂದು ತಿಳಿಸುವುದರ ಜತೆಗೆ ಮುಂದಿನ ವೃತ್ತಿ ಪರ ಶಿಕ್ಷಣದ ಕುರಿತು ಮಾಹಿತಿ ನೀಡಿದರು.ಪಪೂ ಕಾಲೇಜಿನ ಪ್ರಾಂಶುಪಾಲೆ ಲಲಿತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾಂಕಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಪ್ರಗತಿ ನಾಯ್ಕ, ಉಪನ್ಯಾಸಕಿ ಪ್ರಿಯಂಕಾ ನಾಯ್ಕ, ಉಪನ್ಯಾಸಕಿ ನತಾಷಾ ಫರ್ನಾಂಡಿಸ್ ಬಹುಮಾನ ಯಾದಿ ವಾಚಿಸಿದರು. ಉಪನ್ಯಾಸಕ ರಾಜೇಶ ಮರಾಠಿ ವಂದಿಸಿದರು. ಉಪನ್ಯಾಸಕಿ ಫರ್ಜಿನ್ ಮುಲ್ಲಾ ನಿರೂಪಿಸಿದರು.