ಮಡಿಕೇರಿ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಗತ್ಯ ಉಪಕರಣಗಳು, ಆಟಿಕೆ
ಮಡಿಕೇರಿ: ಮಡಿಕೇರಿ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಗತ್ಯ ಉಪಕರಣಗಳು, ಆಟಿಕೆಗಳನ್ನು ಕೊಡುಗೆಯಾಗಿ ನೀಡಲಾಯಿತು.ಮಡಿಕೇರಿ ತಾಲೂಕಿನ ಕಗ್ಗೋಡ್ಲು, ಸುಭಾಷ್ ನಗರ, ಹೂಕಾಡು ಸೈಸಾರಿಯ ಅಂಗನವಾಡಿ ಕೇಂದ್ರಗಳಿಗೆ ರೋಟರಿ ಜಿಲ್ಲೆಯ ರಾಜ್ಯಪಾಲ ಪಿ.ಕೆ. ರಾಮಕೖಷ್ಣ, ಉಪರಾಜ್ಯಪಾಲ ಧಿಲನ್ ಚಂಗಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ವಿವಿಧ ಆಟಿಕೆಗಳು, ಅಗತ್ಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು.ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಚತೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ.ಕೆ. ರಾಮಕೃಷ್ಣ, ಮಕ್ಕಳಿಗೆ ಬಾಲ್ಯದಲ್ಲೇ ಶುಚಿತ್ವದ ತಿಳಿವಳಿಕೆ ನೀಡುವ ಕಾರ್‍ಯ ಶ್ಲಾಘನೀಯ ಎಂದರು.ರೋಟರಿ ಮಿಸ್ಟಿ ಹಿಲ್ಸ್ ಕಾರ್‍ಯದಶಿ೯ ಬಿ.ಕೆ. ಕಾರ್ಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮೇಪಾಡಂಡ ಸವಿತಾ ಕೀತ೯ನ್, ಅಂಗನವಾಡಿ ಕಾರ್‍ಯಕತೇಯರಾದ ಜಯಶ್ರೀ ರೈ, ವೀಣಾ, ಸರಸ್ವತಿ, ಸಹಾಯಕಿ ಲೀಲಾ, ಪ್ರೇಮ, ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರು ಸದಸ್ಯರು ಹಾಜರಿದ್ದರು.