ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಫ್ಲೋರೈಡ್‌ಮುಕ್ತ ಜಿಲ್ಲೆಯನ್ನಾಗಿಸಲು ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಜೀವ ರಸಾಯನಶಾಸ್ತ್ರ ಮತ್ತು ಶ್ರೀದೇವಿ ಸಮುದಾಯ ಔಷಧ ಆರೋಗ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ ಕಾರ್ಯಾಗಾರದಲ್ಲಿ ಮಾತನಾಡಿದರು.ತುಮಕೂರು ಜಿಲ್ಲೆಯಲ್ಲಿಯೇ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾಗಳಲ್ಲಿ ಅತಿ ಹೆಚ್ಚಾಗಿ ಪ್ಲೋರೋಸಿಸ್ ಪ್ರಕರಣಗಳು ಕಂಡು ಬರುತ್ತವೆ. ನೀರಿನಲ್ಲಿ ಫ್ಲೋರೈಡ್ ಸಾಂದ್ರತೆ ಹೆಚ್ಚಾಗಿದ್ದು, ಮೂಳೆ ಮತ್ತು ದಂತದ ಪ್ಲೋರೋಸಿಸ್ ಪ್ರಕರಣಗಳು ವರದಿಯಾಗಿದೆ. ಪ್ಲೋರೋಸಿಸ್ ಒಂದು ತಡೆಗಟ್ಟಬಹುದಾದ ಕಾಯಿಲೆಯಾಗಿದ್ದು, ಅಯೋಡಿನ್ ಕೊರತೆಯನ್ನು ಹೆಚ್ಚಾಗಿದ್ದು ಅದನ್ನು ಗುರುತಿಸಿ ತಡೆಗಟ್ಟುವ ಕ್ರಮಗಳ ಬಗ್ಗೆ ಸ್ವವಿಸ್ತಾರವಾಗಿ ವಿವರಿಸಿದರು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಮಹಿಳೆಯರಲ್ಲಿ ಹೆಚ್ಚು ರಕ್ತಹೀನತೆಯ ಪ್ರಕರಣಗಳು ವರದಿಯಾಗುತ್ತಿದ್ದು, ಇದ್ದರಿಂದ ತಾಯಿಂದಿರ ಮರಣ ಮತ್ತು ಶಿಶುವಿನ ಮರಣ ಸಾಂದ್ರತೆ ಹೆಚ್ಚಾಗಿದೆ. ನಮ್ಮ ಜಿಲ್ಲೆಯಲ್ಲಿ ಆರೋಗ್ಯ ಅಭಿಯಾನದ ಅಡಿಯಲ್ಲಿ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್ ಮಾತನಾಡಿ, ಇಂತಹ ವೈದ್ಯಕೀಯ ಕಾರ್ಯಾಗಾರಗಳು ಆಯೋಜಿಸುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇಂದಿನ ನಿರಂತರ ವೈದ್ಯಕೀಯ ಕಲಿಕಾ ಶಿಕ್ಷಣದ ಮೈಕ್ರೋನ್ಯೂಟ್ರಿಯೆಂಟ್ಸ್ ಆ್ಯಂಡ್ ಹೆಲ್ತ್ ಅಗತ್ಯ, ಮತ್ತು ಉಪಯೋಗಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಬೆಂಗಳೂರಿನ ರಾಜ್ಯ ಪೌಷ್ಟಿಕಾಂಶ ಸಲಹೆಗಾರ ಕೆ.ವಿಶ್ವನಾಥ್, ಆರೋಗ್ಯ ಸೌಧದ ಪೌಷ್ಟಿಕಾಂಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಉಪನಿರ್ದೇಶಕ ಡಾ.ಎಸ್.ಎಂ.ಶ್ರೀಧರ್, ತುಮಕೂರು ಸಮುದಾಯ ಔಷಧ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಭರತೇಶ್, ಕೋಲಾರದ ಎಸ್.ಡಿ.ಯು.ಎಂ.ಸಿ. ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್.ಶಶಿಧರ್, ತುಮಕೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ನೇತ್ರ ತಜ್ಞ ಡಾ.ಲಾವಣ್ಯ ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಮೋಹನ್‌ಕುಮಾರ್, ಶ್ರೀದೇವಿ ಸಮುದಾಯ ಔಷಧ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಪಿ.ಎಂ.ರವೀಶ್, ಡಾ.ರಂಗಸ್ವಾಮಿ, ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಜಿ.ಸತೀಶ್, ಡಾ.ಎಸ್.ಎಂ.ಶ್ರೀಧರ್, ತುಮಕೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.