ಹಾನಗಲ್ಲ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಸಹಕರಿಸಿ-ಶಾಸಕ ಮಾನೆ

| Published : Jul 16 2024, 12:48 AM IST

ಹಾನಗಲ್ಲ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಸಹಕರಿಸಿ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ತ್ಯಾಜ್ಯಗಳಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯನ್ನು ಮಾಡಲಾಗುತ್ತಿದ್ದು, ಇದರಿಂದ ಪುರಸಭೆಗೂ ಆದಾಯ, ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಸಹಕಾರ ನೀಡೋಣ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಪುರಸಭೆ ತ್ಯಾಜ್ಯಗಳಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯನ್ನು ಮಾಡಲಾಗುತ್ತಿದ್ದು, ಇದರಿಂದ ಪುರಸಭೆಗೂ ಆದಾಯ, ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಸಹಕಾರ ನೀಡೋಣ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಹಾನಗಲ್ಲ ಪುರಸಭೆಯ ಸಾಮಾನ್ಯ ನಿಧಿಯಡಿ ೩೧ ಜನ ಪೌರಕಾರ್ಮಿಕರು, ೧೪ ಜನ ಕುಡಿಯುವ ನೀರು ಸರಬರಾಜು ಸಿಬ್ಬಂದಿ ಹಾಗೂ ೯ ಜನ ಪುರಸಭೆ ಸ್ವಚ್ಛತಾ ವಾಹನಗಳ ಚಾಲಕರಿಗೆ ಮಳೆಗಾಲದ ಸುರಕ್ಷತಾ ಪರಿಕರ ವಿತರಿಸಿ ಮಾತನಾಡಿದ ಅವರು, ಪ್ರತಿ ಮನೆಗಳಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಪುರಸಭೆ ವಾಹನ ಬಂದಾಗ ನೀಡಿದರೆ ವಿಲೇವಾರಿಗೆ ಅನುಕೂಲವಾಗಲಿದೆ. ಈಗಾಗಲೇ ಪುರಸಭೆಯಿಂದ ತ್ಯಾಜ್ಯ ವಿಲೇವಾರಿ ಘಟಕದ ಸಾಮರ್ಥ್ಯ ಹೆಚ್ಚಿಸಲಾಗಿದ್ದು, ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದ ಆದಾಯದ ಮೂಲ ಕಂಡುಕೊಳ್ಳಲಾಗಿದೆ ಎಂದು ಹೇಳಿದ ಅವರು ಮಳೆ, ಗಾಳಿ, ಚಳಿ ಲೆಕ್ಕಿಸದೇ ಪೌರಕಾರ್ಮಿಕರು ನಗರದ ಸ್ವಚ್ಛತೆ, ನೈರ್ಮಲ್ಯ ಕಾರ್ಯದಲ್ಲಿ ತೊಡಗಿದ್ದಾರೆ. ಇವರೆಲ್ಲರ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷತಾ ಸಲಕರಣೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಪುರಸಭೆ ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಸದಸ್ಯರಾದ ಪರಶುರಾಮ ಖಂಡೂನವರ, ವಿರೂಪಾಕ್ಷಪ್ಪ ಖಡಬಗೇರಿ, ಮೇಕಾಜಿ ಕಲಾಲ, ಮರ್ದಾನಸಾಬ ಬಡಗಿ, ವಿನಾಯಕ ಬಂಕನಾಳ, ಗುರುರಾಜ ನಿಂಗೋಜಿ, ಉಮೇಶ ಮಾಳಗಿ, ಮಮತಾ ಆರೆಗೊಪ್ಪ, ರೇಣುಕಾ ಸಾತಪತಿ, ಮುಖ್ಯಾಧಿಕಾರಿ ಜಗದೀಶ್ ವೈ.ಕೆ., ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಅಭಿಯಂತರ ಎನ್.ಕೆ. ಮಿರ್ಜಿ, ಎನ್.ಎಸ್. ನಾಗನೂರ, ಜಿ.ಟಿ. ಪೂಜಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.