ಸಾರಾಂಶ
ಪ್ರಾಥಮಿಕ ಸಹಕಾರಸಂಘಗಳ ಅಭಿವೃದ್ದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಚಾಮರಾಜನಗರ ಶಾಸಕ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾಸಹಕಾರ ಬ್ಯಾಂಕಿನ ನಿರ್ದೇಶಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಪ್ರಾಥಮಿಕ ಸಹಕಾರಸಂಘಗಳ ಅಭಿವೃದ್ದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಚಾಮರಾಜನಗರ ಶಾಸಕ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾಸಹಕಾರ ಬ್ಯಾಂಕಿನ ನಿರ್ದೇಶಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ತಾಲೂಕಿನ ಮಂಗಲ, ಯಡಿಯೂರು ಗ್ರಾಮದ ನಡುವಿನ ಶಂಕರದೇವರಬೆಟ್ಟದಲ್ಲಿ ಚಾಮರಾಜನಗರ, ಯಳಂದೂರು ಪ್ರಾಥಮಿಕ ಸಹಕಾರಸಂಘಗಳ ಕ್ಷೇಮಾಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಸಹಕಾರ ಸಂಘಗಳ ನಿರ್ದೇಶಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮನೋಭಾವ ರೂಢಿಸಿಕೊಳ್ಳಬೇಕು, ಹಾಗಾದಾಗ ಸಹಕಾರ ಸಂಘಗಳು ಮಾದರಿಯಾಗುವುದರ ಜತೆ ಅಭಿವೃದ್ಧಿಯತ್ತ ಸಾಗುತ್ತವೆ. ಸಂಘಗಳ ಕಟ್ಟಡಗಳು ಎಲ್ಲೆಲ್ಲಿ ಶಿಥಿಲವಾಗಿವೆಯೋ. ಅವುಗಳನ್ನು ಪರಿಶೀಲಿಸಿ, ನಮ್ಮ ಗಮನಕ್ಕೆ ತರಬೇಕು, ಸರ್ಕಾರದಿಂದ ಸೂಕ್ತ ಅನುದಾನ ಮಂಜೂರು ಮಾಡಿಸುವ ಮೂಲಕ ಹೊಸಕಟ್ಟಡ ನಿರ್ಮಿಸಿ ಕೊಡಲಾಗುವುದು.ಸಂಘದಿಂದ ರೈತರಿಗೆ ಬೇಕಾದ ಸಾಲಸೌಲಭ್ಯಗಳನ್ನು ಸಕಾಲಕ್ಕೆ ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಚಾಮರಾಜನಗರ, ಯಳಂದೂರು ಪ್ರಾಥಮಿಕ ಸಹಕಾರಸಂಘಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ದೊಡ್ಡರಾಯಪೇಟೆ ಮಹದೇವಯ್ಯ, ಮಂಗಲಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಹೇಶ್, ನಿರ್ದೇಶಕ ಕೃಷ್ಣ, ಕ್ಯಾತಶೆಟ್ಟಿ, ನಾಗೇಶ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಎಂಸಿಡಿಸಿಸಿ ವ್ಯವಸ್ಥಾಪಕ ನಿರ್ದೇಶಕ ಹುಚ್ಚನಾಯಕ, ಮೇಲ್ವಿಚಾರಕ ಮಂಜು, ರಾಚಪ್ಪ, ವಿವಿಧ ಪಿಎಸಿಸಿ ಮುಖ್ಯ ಕಾರ್ಯನಿರ್ವಾಹಕರು ಹಾಜರಿದ್ದರು.