ಸಾಮಾಜಮುಖಿ ಕಾರ್ಯಗಳಿಗೆ ಸಹಾಯ, ಸಹಕಾರ

| Published : Jun 27 2024, 01:05 AM IST

ಸಾರಾಂಶ

ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನವರು ಸಾಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲಿ, ನಾವು ನಿಮಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವೆ ಎಂದು ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ, ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನವರು ಸಾಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲಿ, ನಾವು ನಿಮಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವೆ ಎಂದು ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ, ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಭರವಸೆ ನೀಡಿದರು.ತಾಲೂಕಿನ ಜುಗೂಳ ಗ್ರಾಮದ ದಿ.ಈರಗೌಡ ಬಸಗೌಡ ಪಾಟೀಲ ಮತ್ತು ದಿ.ಪ್ರತಿಭಾ ದಿಲೀಪ ಪಾಟೀಲ ಸ್ಮರಣಾರ್ಥ ಜುಗೂಳ ಗ್ರಾಮದ ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿ, ಮಾತನಾಡಿದ ಅವರು, ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನ ಸದಸ್ಯರು ನಿಜಕ್ಕೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಾಮುಗ್ರಿಗಳನ್ನು ವಿತರಿಸಲು ಸಹಕರಿಸುವಂತೆ ನಮ್ಮನ್ನು ಅವರು ಕೇಳಿಕೊಂಡಾಗ ಖುಷಿಯಿಂದಲೇ ಅವರ ಕಾರ್ಯವನ್ನು ಮೆಚ್ಚಿಕೊಂಡು ಒಪ್ಪಿರುವುದಾಗಿ ತಿಳಿಸಿ ತಮ್ಮ ತಂದೆಯವರ ಸಮಾಜಮುಖಿ ಕಾರ್ಯಗಳನ್ನು ನೆನೆದು ಭಾವುಕರಾದರು.ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾ ಪಾಟೀಲ ಮಾತನಾಡಿದರು. ಮುಖಂಡರಾದ ಸುರೇಶ ಪಾಟೀಲ, ಆನಂದ ಕುಲಕರ್ಣಿ, ಅವಿನಾಶ ಪಾಟೀಲ, ನಿತೀನ ಪಾಟೀಲ, ಚಿದಾನಂದ ತಾರದಾಳೆ ಸೇರಿದಂತೆ ಎರಡೂ ಶಾಲೆಗಳ ಶಿಕ್ಷಕ ವೃಂದದವರು, ಸಿದ್ದಿ ಹುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಹಾಗೂ ಪದಾಧಿಕಾರಿಗಳಾದ ಪ್ರಶಾಂತ ಸಾವಂತ, ಬಾಬಾಸಾಹೇಬ ತಾರದಳೆ, ಸುಧಾಕರ ಸುಂಕೆ, ರಾಜು ಅಮ್ಮನಿಗೆ, ಸುಪಿತ ಗುರುಗೋಳೆ, ಕೇತನ ದಾನೋಳೆ, ಪ್ರತೀಕ್ ಲಾಂಡಗೆ, ವಿಫೂಲ್ ಉಪಾಧ್ಯೆ, ಅಭಿ ಗುರಗೋಳೆ ಉಪಸ್ಥಿತರಿದ್ದರು.26 ಕಾಗವಾಡ-2

ಶಾಲಾ ಮಕ್ಕಳಿಗೆ ಕಲಿಕೆ ಸಾಮುಗ್ರಿಗಳನ್ನು ಅಣ್ಣಾಸಾಬ ಪಾಟೀಲ ವಿತರಿಸಿದರು.