ಅಧಿಕ ಮತಗಳಿಂದ ಸುರೇಶ್‌ ಗೆಲವಿಗೆ ಸಹಕಾರ

| Published : Mar 23 2024, 01:22 AM IST

ಸಾರಾಂಶ

ಕನಕಪುರ: ತಾಲೂಕಿನ ಅಭಿವೃದ್ಧಿಯ ಹರಿಕಾರ ಹಾಗೂ ಸಂಸದರ ನಿಧಿಯನ್ನು ಸಂಪರ್ಕವಾಗಿ ಗ್ರಾಮೀಣ ಅಭಿವೃದ್ಧಿಗೆ ಬಳಸಿರುವ ನಮ್ಮ ನೆಚ್ಚಿನ ನಾಯಕ ಡಿ.ಕೆ.ಸುರೇಶ್ ಅವರಿಗೆ ಈ ಬಾರಿ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಲಾಗುವುದು ಎಂದು ಚಾಕನಹಳ್ಳಿ ಗ್ರಾಪಂ ಕೆರಳಾಳುಸಂದ್ರ ಸದಸ್ಯ ವೆಂಕಟೇಗೌಡ ತಿಳಿಸಿದರು.

ಕನಕಪುರ: ತಾಲೂಕಿನ ಅಭಿವೃದ್ಧಿಯ ಹರಿಕಾರ ಹಾಗೂ ಸಂಸದರ ನಿಧಿಯನ್ನು ಸಂಪರ್ಕವಾಗಿ ಗ್ರಾಮೀಣ

ಅಭಿವೃದ್ಧಿಗೆ ಬಳಸಿರುವ ನಮ್ಮ ನೆಚ್ಚಿನ ನಾಯಕ ಡಿ.ಕೆ.ಸುರೇಶ್ ಅವರಿಗೆ ಈ ಬಾರಿ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಲಾಗುವುದು ಎಂದು ಚಾಕನಹಳ್ಳಿ ಗ್ರಾಪಂ ಕೆರಳಾಳುಸಂದ್ರ ಸದಸ್ಯ ವೆಂಕಟೇಗೌಡ ತಿಳಿಸಿದರು.

ಕೆರಳಾಳುಸಂದ್ರದಲ್ಲಿ ಚಾಕನಹಳ್ಳಿ ಗ್ರಾಪಂ ವ್ಯಾಪ್ತಿ ಕಾಂಗ್ರೆಸ್‌ ಕಾರ್ಯಕರ್ತರು, ಸದಸ್ಯರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಸುರೇಶ್ ಸಂಸದರಾದ ನಂತರ ನಮ್ಮಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲೂ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ದೇಶದಲ್ಲೇ ಒಬ್ಬ ಮಾದರಿ ಯುವ ಸಂಸದರಾಗಿರುವುದು ಹೆಮ್ಮೆಯ ವಿಷಯ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮೆಲ್ಲಾ ಗ್ರಾಪಂ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಇಂದಿನಿಂದಲೇ ಮನೆಮನೆಗೆ ತೆರಳಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಸಂಸದರ ಕೆಲಸಗಳ ಬಗ್ಗೆ ಮತದಾರರಿಗೆ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ಗಿರೀಶ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಸಂಸದ ಡಿ.ಕೆ.ಸುರೇಶ್ ಒಬ್ಬ ಗ್ರಾಪಂ ಸದಸ್ಯನಂತೆ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಹಗಲಿರುಳು ಮಾಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ನುಡಿದಂತೆ ನಡೆಯುತ್ತಿದ್ದು ಸಂಸದ ಡಿ.ಕೆ.ಸುರೇಶ್ ಗೆಲವಿನಿಂದ ಮತ್ತಷ್ಟು ಬಡವರ ಹಾಗೂ ಜನಪರ ಯೋಜನೆಗಳು ಜಾರಿಗೆ ತರಲು ನೆರವಾಗುತ್ತದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ಎಲ್ಲರ ಬೆಂಬಲದಿಂದ ಅತಿ ಹೆಚ್ಚು ಮತಗಳನ್ನು ಹಾಕಿಸಿ ಅಭೂತಪೂರ್ವ ಗೆಲುವನ್ನು ತಂದು ಕೊಡಲಾಗುವುದು ಎಂದರು.

ಚಾಕನಹಳ್ಳಿ ಗ್ರಾಪಂ ಅಧ್ಯಕ್ಷೆ ರಶ್ಮಿ, ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಚಿಕ್ಕತಾಯಮ್ಮ, ಜಯಶೀಲ, ಮಂಜುಶ್ರೀ, ಉಮಾ ರವಿ, ಶೇಖರ್, ಮುದ್ದೇಗೌಡ, ಗಿರೀಶ ಮಹದೇವ್, ದೇವುಕುಮಾರ್, ಮುಖಂಡರಾದ ಕೆಂಪಣ್ಣ, ಮರಿಯಣ್ಣ, ತಿಮ್ಮೇಗೌಡ, ಪ್ರಕಾಶ್, ಹೊನ್ನಯ್ಯ, ದೇಶಲಿಂಗೇಗೌಡ, ಚಿಕ್ಕ ಸಿದ್ಧೇಗೌಡ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು. ಕೆ ಕೆ ಪಿ ಸುದಿ 01:

ಕೆರಳಾಳುಸಂದ್ರದಲ್ಲಿ ಚಾಕನಹಳ್ಳಿ ಗ್ರಾಪಂ ವ್ಯಾಪ್ತಿಯ ಸದಸ್ಯರು, ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.