ದೊಡ್ಡಬಳ್ಳಾಪುರ: ನಗರ ಹರವಲಯದ ಬೆಂಗಳೂರು ಮುಖ್ಯರಸ್ತೆಯ ಬಾಶೆಟ್ಟಿಹಳ್ಳಿ ಸಮೀಪ ಹೋಟೆಲ್‌ಪೊಂದರ ಬಳಿ ಕಳೆದ ಮೇ 10ರಂದು ನಡೆದಿದ್ದ ಹೇಮಂತ್‌ಗೌಡ ಹತ್ಯೆ ಪ್ರಕರಣದ 2ನೇ ಪ್ರಮುಖ ಆರೋಪಿ ಶ್ರೀನಿವಾಸ್‌ ಎಂಬಾತನನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ದೊಡ್ಡಬಳ್ಳಾಪುರ: ನಗರ ಹರವಲಯದ ಬೆಂಗಳೂರು ಮುಖ್ಯರಸ್ತೆಯ ಬಾಶೆಟ್ಟಿಹಳ್ಳಿ ಸಮೀಪ ಹೋಟೆಲ್‌ಪೊಂದರ ಬಳಿ ಕಳೆದ ಮೇ 10ರಂದು ನಡೆದಿದ್ದ ಹೇಮಂತ್‌ಗೌಡ ಹತ್ಯೆ ಪ್ರಕರಣದ 2ನೇ ಪ್ರಮುಖ ಆರೋಪಿ ಶ್ರೀನಿವಾಸ್‌ ಎಂಬಾತನನ್ನು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿ ಶ್ರೀನಿವಾಸ್‌ ಕಾಲಿಗೆ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಗುಂಡು ಹಾರಿಸುವ ಮೂಲಕ ಬಂಧನಕ್ಕೊಳಪಡಿಸಿದ್ದಾರೆ.

ಹೇಮಂತ್ ಗೌಡ ಕೊಲೆ ಪ್ರಕರಣದ ಮೊದಲನೇ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಎಂಬುವರ ಸಹೋದರ ತಾಲೂಕಿನ ಮೇಡಹಳ್ಳಿಯ ನಿವಾಸಿ ಆರೋಪಿ ಶ್ರೀನಿವಾಸ್, ಮುಖ್ಯಪೇದೆ ಚಂದ್ರಶೇಖರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದಾಗ ಗುಂಡು ಹೊಡೆಯುವುದು ಅನಿವಾರ್ಯವಾಗಿತ್ತು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಹಳ್ಳಿ ಮನೆಯೊಂದರಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಮುಖ್ಯಪೇದೆ ಚಂದ್ರಶೇಖರ್ ಹಿಡಿಯಲು ಮುಂದಾಗಿದ್ದರು. ಆರೋಪಿ ಶ್ರೀನಿವಾಸ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಅವರು ಆರೋಪಿ ಶ್ರೀನಿವಾಸ್ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಹೇಮಂತ್ ಗೌಡ ಹತ್ಯೆ ಪ್ರಕರಣದಲ್ಲಿ ಇಲ್ಲಿವರೆಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಶ್ರೀನಿವಾಸ್, ನರಸಿಂಹಮೂರ್ತಿ ಇಬ್ಬರ ಮೇಲೂ ಈಗಾಗಲೇ ಕೊಲೆ ಯತ್ನ, ಡಕಾಯಿತಿ ದೂರುಗಳು ದಾಖಲಾಗಿದ್ದು ರೌಡಿಶೀಟರ್ ಪಟ್ಟಿಯಲ್ಲೂ ಇದ್ದಾರೆ. ಗಾಯಾಳು ಆರೋಪಿ ಹಾಗೂ ಮುಖ್ಯಪೇದೆ ಚಂದ್ರಶೇಖರ್‌ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಕ್ಸ್‌...............

ನ್ಯಾಯಾಲಯಕ್ಕೆ ಶರಣಾಗಲು ಬಂದ ಆರೋಪಿ ಬಂಧನ

ದೊಡ್ಡಬಳ್ಳಾಪುರ: ನಗರ ಹೊರವಲಯದ ಬಾಶೆಟ್ಟಿಹಳ್ಳಿಯಲ್ಲಿನ ಹೋಟೆಲ್ ಬಳಿ ನಡೆದಿದ್ದ ಹೇಮಂತ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಾಲೂಕಿನ ಮೇಡಹಳ್ಳಿ ಗ್ರಾಮದ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಹೇಮಂತ್ ಗೌಡರ ತಂದೆ ಹುಸ್ಕೂರು ಶಶಿಕುಮಾ‌ರ್ ಅವರು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ನರಸಿಂಹಮೂರ್ತಿ ತಲೆಮರೆಸಿಕೊಂಡಿದ್ದ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನರಸಿಂಹಮೂರ್ತಿ ಏಳೆಂಟು ಸ್ನೇಹಿತರ ವಿರುದ್ಧವೂ ದೂರು ದಾಖಲಾಗಿದೆ.

ನ್ಯಾಯಾಲಯಕ್ಕೆ ಬಂದಾಗ ಬಂಧನ:

ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದ ವೇಳೆ ನ್ಯಾಯಾಲಯದ ಹೊರಗೆ ನರಸಿಂಹಮೂರ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.(ಆ್ಯಂಕರ್‌ನಲ್ಲಿ ಸರಿಹೊಂದುವ ಒಂದು ಫೋಟೊ ಮಾತ್ರ ಬಳಸಿ)

17ಕೆಡಿಬಿಪಿ1-

ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆದಿದ್ದ ಹೇಮಂತ್‌ಗೌಡ ಕೊಲೆ ಪ್ರಕರಣದ ಆರೋಪಿ ಶ್ರೀನಿವಾಸ್‌ ಕಾಲಿಗೆ ಗುಂಡು ಹೊಡೆದು ಬಂಧಿಸಲಾದ ಸ್ಥಳವನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದರು.17ಕೆಡಿಬಿಪಿ2-

ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶ್ರೀನಿವಾಸ್ ಬಗ್ಗೆ ವೈದ್ಯರೊಂದಿಗೆ ಪೊಲೀಸರ ಸಮಾಲೋಚನೆ.17ಕೆಡಿಬಿಪಿ3-

ಆರೋಪಿಯಿಂದ ಹಲ್ಲೆಗೊಳಗಾದ ಮುಖ್ಯಪೇದೆ ಚಂದ್ರಶೇಖರ್ ಯೋಗ ಕ್ಷೇಮ ವಿಚಾರಿಸಿದ ಪೊಲೀಸ್ ಅಧಿಕಾರಿಗಳು.