ಸ್ತ್ರೀಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಮಾದರಿ: ಶಾಸಕ ಲಮಾಣಿ

| Published : May 10 2024, 11:50 PM IST

ಸ್ತ್ರೀಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಮಾದರಿ: ಶಾಸಕ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಡ್ಡಿ ಸಮಾಜಕ್ಕೆ ಬಡತನ ನೀಡಬೇಡವೆಂದು ಮಲ್ಲಿಕಾರ್ಜುನನಲ್ಲಿ ಭಜಿಸಿ ಪರಮಾತ್ಮನಿಗೆ ಅಂಬಲಿ ನೀಡಿದ ಶರಣೆ ನಮಗೆ ಆದರ್ಶಳಾಗಿದ್ದಾಳೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಲ್ಲಮ್ಮ.

ಶಿರಹಟ್ಟಿ:

ಸಂಸಾರದಲ್ಲಿ ಇದ್ದುಕೊಂಡೆ ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ತಿದ್ದಿ ಸರಿದಾರಿಗೆ ತಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರಿಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಡ್ಡಿ ಸಮಾಜವು ನಂಬಿಕೆಗೆ ಅರ್ಹವಾಗಿದ್ದು, ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು.

ಕಾಯಕದಲ್ಲಿ ಶ್ರದ್ಧೆಯಿಟ್ಟು ಮನುಕುಲಕ್ಕೆ ಆದರ್ಶಳಾಗಿ ಬದುಕಿದ ಹೇಮರಡ್ಡಿ ಮಲ್ಲಮ್ಮಳ ಬದುಕು ಸರ್ವರಿಗೂ ಸ್ಫೂರ್ತಿಯಾಗಿದೆ ಎಂದ ಅವರು, ರಡ್ಡಿ ಸಮಾಜಕ್ಕೆ ಬಡತನ ನೀಡಬೇಡವೆಂದು ಮಲ್ಲಿಕಾರ್ಜುನನಲ್ಲಿ ಭಜಿಸಿ ಪರಮಾತ್ಮನಿಗೆ ಅಂಬಲಿ ನೀಡಿದ ಶರಣೆ ನಮಗೆ ಆದರ್ಶಳಾಗಿದ್ದಾಳೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಇವರ ಜೀವನವು ಅವಿಸ್ಮರಣೀಯವಾಗಿದೆ ಎಂದರು.

ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಚರಿತ್ರೆಯನ್ನು ಪ್ರತಿಯೊಬ್ಬ ಮಹಿಳೆ ಅರಿತುಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅವರು ಪ್ರತಿಪಾದಿಸಿದ ಭಕ್ತಿ ಮಾರ್ಗದ ದಾರಿಯಲ್ಲಿ ನಡೆಯಬೇಕು ಎಂದ ಅವರು, ಏನೇ ಕಷ್ಟ ಬಂದರೂ ಅದಕ್ಕೆ ಹೆದರದೇ ಪರರಿಗೆ ಒಳಿತು ಮಾಡುವ ಗುಣ ಅವರಲ್ಲಿತ್ತು. ಅಂತಹ ಸದ್ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಜಿಪಂ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಕೊಟ್ರೇಶ ಸಜ್ಜನರ, ಮೋಹನ್ ಗುತ್ತೆಮ್ಮನವರ, ಶಿವನಗೌಡ ಪಾಟೀಲ, ಆರ್.ಆರ್. ಗಡ್ಡದ್ದೇವರಮಠ, ರಮೇಶ ನಿರ್ವಾಣಿಶೆಟ್ರ, ಗಿರೀಶರೆಡ್ಡಿ ಮೇಕಳಿ, ಮಹೇಶರಡ್ಡಿ ಬೆಲಹುಣಸಿ, ಹನಮರಡ್ಡಿ ಭರಮರಡ್ಡಿ, ವೆಂಕಣ್ಣ ಸಿಂದೋಗಿ, ಶ್ರೀಕೃಷ್ಣ ದುರ್ಗದ, ನವೀನ ಬಸವರಡ್ಡಿ, ಅಪ್ಪಣ್ಣ ಮರಡ್ಡಿ, ಶ್ರೀನಿವಾಸ ಬಸವರಡ್ಡಿ, ಪ್ರವೀಣ ಅಳವಂಡಿ, ಭರಮರಡ್ಡಿ ಗೋವಣ್ಣವರ, ಬಸವರಡ್ಡಿ ಮಾದನೂರ, ಶ್ರೀನಿವಾಸ ಹ್ಯಾಟಿ, ವೆಂಕಟೇಶ ಬಸವರಡ್ಡಿ, ಶೇಷರಡ್ಡಿ ಅಳವಂಡಿ, ನರಸಿಂಹರಡ್ಡಿ ಬೆಲಹುಣಸಿ, ಫಕೀರಡ್ಡಿ ಬಸವರಡ್ಡಿ, ವಿನಾಯಕ ಅಳವಂಡಿ, ನವೀನ ಅಳವಂಡಿ ಸೇರಿ ಇತರರು ಇದ್ದರು.